ಶಾಲೆಗಳು ಆರಂಭವಾಗದೆ ಮಕ್ಕಳ ಭವಿಷ್ಯ ಅತಂತ್ರ – ಆರ್. ವಿಶ್ವಸಾಗರ್

ಚಿತ್ರದುರ್ಗ.ಡಿ.೨೮; : ಕೋವಿಡ್ -19, ಕೊರೋನಾ ವೈರಸ್‌ನಿಂದಾಗಿ ಶಾಲೆಗಳು ಆರಂಭವಾಗದೆ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಹೀನ ಪ್ರೌವೃತ್ತಿಗಳು ದಿನೇ ದಿನೇ ಹೆಚ್ಚಾಗುತ್ತಿದೆಯೆಂದು ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಆರ್. ವಿಶ್ವಸಾಗರ್ ಹೇಳಿದರು.  ರಾಮ್‌ದಾಸ್ ಕಾಂಪೌಂಡ್ ಬಡಾವಣೆಯಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ, ವಿಮುಕ್ತಿ ವಿದ್ಯಾಸಂಸ್ಥೆ, ಕರ್ನಾಟಕ ಶಾಂತಿ ಸೌಹಾರ್ಧವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗಾಗಿ ಚಿತ್ರಕಲೆ, ಸಂಗೀತ, ಕ್ರೀಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊರೋನಾ ವೈರಸ್ ಪ್ರಸ್ತುತ ವರ್ಷವನ್ನು ನುಂಗಿಹಾಕಿದ್ದು, ಶಾಲಾ ಕಾಲೇಜುಗಳು ಆರಂಭವಾಗದೇ ಇರುವುದು ಮಕ್ಕಳ ಭವಿಷ್ಯ ಅತಂತ್ರವಾಗಲು ಕಾರಣವಾಗಿದೆ ಎಂದು ಹೇಳಿದರು. ಕೊರೋನಾದಿಂದಾಗಿ ಶಾಲೆಗಳು ಆರಂಭವಾಗಿಲ್ಲ ಮಕ್ಕಳು ಪಠ್ಯ ವಿಚಾರಕ್ಕೆ ಒತ್ತು ನೀಡುವ ಬದಲಾಗಿ ಮೊಬೈಲ್ ಬಳಕೆ, ಸಮಯ ವ್ಯರ್ಥ, ಕಲಿಕೆಯಲ್ಲಿ ಹಿನ್ನೆಡೆಯಂತಹ ಪ್ರೌವೃತ್ತಿಯಿಂದಾಗಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ದಿನೇ ದಿನೇ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.  ಗುಲ್ಶನ್-ಎ-ಮಧೀನಾ ಮಸಿದಿಯ ಕಾರ್ಯದರ್ಶಿಗಳಾದ ಫಾರೂಕ್‌ರವರು ಮಾತನಾಡಿ ಮುಸ್ಲಿಂ ಮಕ್ಕಳಿಗಾಗಿ ಕ್ರೀಡೆ, ಸಂಗೀತಾ, ಚಿತ್ರಕಲಾ ಸ್ಪರ್ಧೆಯಂತಹ ಸೃಜನಶೀಲಾ ಕಾರ್ಯಕ್ರಮ ರೂಪಿಸಿರುವುದು ಅತ್ಯುತ್ತಮವಾದ ಬೆಳವಣಿಗೆ. ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚೆಚ್ಚಾಗಿ ಸಂಘಟಿಸಲು ತಮ್ಮ ಕಡೆಯಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಮುಸ್ಲಿಂ ಸಮುದಾಯದ ಯುವ ಮುಖಂಡ ನಸ್ರುಲ್ಲಾ ರವರು ಮಾತನಾಡಿ ರಾಮ್‌ದಾಸ್ ಕಾಂಪೌಂಡ್ ಬಡಾವಣೆಯ ಮುಸ್ಲಿಂ ಮಕ್ಕಳ ಏಳಿಗೆಗಾಗಿ ವಿಶೇಷ ಒತ್ತು ನೀಡಲು ತಾವು ಸಿದ್ಧರಿದ್ದು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದರು ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದರು.  ಕರ್ನಾಟಕ ಶಾಂತಿ ಮತ್ತು ಸೌಹಾರ್ಧವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಶಾಂತಿ ಮತ್ತು ಸೌಹಾರ್ಧತೆಯನ್ನು ಸಮಾಜದಲ್ಲಿ ಜೀವಿಸುತ್ತಿರುವ ಮಧ್ಯೆ ಕ್ರೀಯಾಶೀಲವಾಗಿ ತರಬೇಕಾಗಿದೆ. ಎಲ್ಲಾ ಸಮುದಾಯಗಳು ಧರ್ಮಗಳು ಶಾಂತಿಯ ಕಡೆಗೆ ಹೆಜ್ಜೆ ಇಟ್ಟಾಗ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ಧತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.  ಶಾಲಾ ಕಾಲೇಜುಗಳು ಆರಂಭವಾಗದೇ ಇರುವುದು ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಬಹು ದೊಡ್ಡ ಪೆಟ್ಟು ಬಿದ್ದಂತಾಗಿದೆ. ಇದರಿಂದಾಗಿ ಮಕ್ಕಳು ಶಿಕ್ಷಣವನ್ನು ಹೊರತುಪಡಿಸಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು. ಚಿತ್ರಕಲೆ, ಕ್ರೀಡೆ, ಸಂಗೀತಾ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಾದ ಶ್ರೀ ಹೆಚ್. ಪ್ಯಾರೇಜಾನ್, ಶರೀಫ್, ಶಿವಕುಮಾರ್ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರಣ್ಯಸಾಗರ್ ಚಿತ್ರಕಲೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದ್ದರು. ಕುಮಾರ್ ಉಪಸ್ಥಿತಿರಿದ್ದರು. ಇದೇ ಸಂದರ್ಭದಲ್ಲಿ ಚಿತ್ರಕಲೆಯಲ್ಲಿ ಪ್ರಶಸ್ತಿವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.