ಶಾಲೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ


ಬ್ಯಾಡಗಿ,ಡಿ.29 ಕೊರೊನಾ ವೈರಸ್? ಹಿನ್ನೆಲೆಯಲ್ಲಿ ಕಳೆದ 9 ತಿಂಗಳುಗಳಿಂದ ಬಂದಾಗಿದ್ದ ಶಾಲೆಗಳು ಜನೇವರಿ 1ರಿಂದ ಪ್ರಾರಂಭಗೊಳ್ಳುತ್ತಿದ್ದು, ಪಟ್ಟಣದಲ್ಲಿರುವ ಎಲ್ಲ ಶಾಲೆಗಳಲ್ಲೂ ಪುರಸಭೆಯ ವತಿಯಿಂದ ಸ್ಯಾನಿಟೈಸರ್’ನ್ನು ಸಿಂಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆಯ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಅವರು, ಜಿಲ್ಲಾ ಹಾಗೂ ತಾಲೂಕು ಆಡಳಿತದ ಮಾರ್ಗದರ್ಶನದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೂ ಸ್ಯಾನಿಟೈಸರ್’ನ್ನು ಸಿಂಪಡಿಸಲು ಮಂಗಳವಾರದಿಂದ ಸ್ಥಳೀಯ ಎಸ್’ಜೆಜೆಎಂ ಸರಕಾರಿ ಪ್ರೌಢಶಾಲೆಯ ಮೂಲಕ ಚಾಲನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಸ್ಯಾನಿಟೈಸರ್’ನ್ನು ಸಿಂಪಡಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪಠ್ಯದಲ್ಲೂ ಕಡಿತ..!!
ರಾಜ್ಯದಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈವರೆಗೆ ಶಾಲೆಗಳು ಪ್ರಾರಂಭವಾಗಿಲ್ಲ. ಎಲ್ಲ ಕಡೆಗಳಲ್ಲೂ ಆನ್‍ಲೈನ್ ಮೂಲಕವೇ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 1 ರಿಂದ 10 ನೇ ತರಗತಿಯವರೆಗಿನ ಪ್ರತಿ ವಿಷಯಗಳಲ್ಲೂ ಕೆಲ ಪಠ್ಯಗಳನ್ನು ಶಿಕ್ಷಣ ಇಲಾಖೆಯು ಕಡಿತಗೊಳಿಸಿದೆ.
ಕೊರೊನಾ ವೈರಸ್ ಇರುವ ಕಾರಣ ಮಕ್ಕಳು ಶಾಲೆಗೆ ತೆರಳದೇ ಆನ್‍ಲೈನ್ ಮೂಲಕವೇ ಶಿಕ್ಷಣ ಪಡೆಯತ್ತಿದ್ದ ವಿದ್ಯಾರ್ಥಿಗಳು ಆನ್?ಲೈನ್?ನಲ್ಲಿ ಗುಣಮಟ್ಟದ ಶಿಕ್ಷಣವನ್ನು ಸರಿಯಾಗಿ ಪಡೆಯಲಾಗುತ್ತಿಲ್ಲ ಎನ್ನುವುದು ಆರೋಪವಾಗಿತ್ತು. ಅಲ್ಲದೆ, ಎಲ್ಲ ಪಠ್ಯಗಳನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವುದು ಅಸಾಧ್ಯ ಎನ್ನುವ ಮಾತನ್ನು ಶಿಕ್ಷಕರು ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಮನಗಂಡ ಶಿಕ್ಷಣ ಇಲಾಖೆಯು ಪಠ್ಯ ಕಡಿತಗೊಳಿಸಿರುವುದು ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಿದೆ.