ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸೂಚನೆ


ಸಂಜೆವಾಣಿ ವಾರ್ತೆ
ಸಂಡೂರು : ಜು: 23: ತಾಲೂಕಿನ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ನಿರ್ಮಾಣ ಮಾಡುವ ಮೂಲಕ ಉತ್ತಮ ಶಿಕ್ಷಣ ದೊರೆಯಬೇಕು ಅದಕ್ಕಾಗಿ ಸೂಕ್ತ ವರದಿ ನೀಡಿ ಎಂದು ಮಾಜಿ ಸಚಿವ ಶಾಸಕ ಈ.ತುಕರಾಂ ತಿಳಿಸಿದರು.
ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅವರು ಉತ್ತರಿಸಿ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಕ್ರಮವಹಿಸಲಾಗಿದೆ ಜಿಗೇನಹಳ್ಳಿ ಕಟ್ಟಡ ನಡೆಯುತ್ತಿದ್ದು ತಾಲೂಕಿನಾದ್ಯಂತ 1004 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ ಕೇವಲ 548 ಶಿಕ್ಷಕರೂ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ 450 ಖಾಲಿ ಇವೆ, 23 ಪ್ರೌಢಶಾಲೆಗಳಲ್ಲಿ 225 ಹುದ್ದೆಗಳು ಮಂಜೂರಾಗಿದ್ದು 134 ಕಾರ್ಯನಿರ್ವಹಿಸುತ್ತಿದ್ದಾರೆ, 91 ಹುದ್ದೆ ಖಾಲಿ ಇವೆ ಶೇ: 50% ರಷ್ಟು ಹುದ್ದೆಗಳು ಖಾಲಿಇದ್ದು ಕಡಿಮೆ ಅತಿಥಿ ಶಿಕ್ಷಕರನ್ನು ನೀಡಿದ್ದಾರೆ ಎಂದರು, ಶಿಕ್ಷಣ ಇಲಾಖೆಯ ಮಾಹಿತಿಯನ್ನು ನೀಡಿದರು, ಶಾಸಕರು ಹೆಚ್ಚು ಅತಿಥಿ ಶಿಕ್ಷಕರನ್ನು ತರವ ಬಗ್ಗೆ ಮಾಹಿತಿ ನೀಡಿದರು, ಬಿಸಿಯೂಟದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಾಲೂಕಿನಲ್ಲಿ 184 ಶಾಲೆಗಳಲ್ಲಿ 93 ಶಾಲೆಗಳಿಗೆ ಇಸ್ಕಾನ್ ಊಟ ಪೂರೈಕೆಯಾಗುತ್ತದೆ91 ಶಾಲೆಗಳಲ್ಲಿ ಅಲ್ಲಿಯೇ ಸಿದ್ದಪಡಿಸಿ ಕೊಡಲಾಗುತ್ತಿದೆ, ಅದರೆ ಇಸ್ಕಾನ್ ಊಟದ ಬದಲಿಗೆ ಸ್ಥಳೀಯವಾಗಿಯೇ ಅಡುಗೆ ಮಾಡಿ ಮಕ್ಕಳಿಗೆ ಒದಗಿಸಿದಾಗ ಉತ್ತಮ ಆಹಾರ ನೀಡಲು ಸಾಧ್ಯ, ಇಸ್ಕಾನ್‍ನಲ್ಲಿ ತಯಾರಿಸುವ ಆಹಾರದಲ್ಲಿ ಬೇಕಾದ ಪೌಷ್ಠಿಕ ಅಂಶಗಳು ಸಿಗಲಾರವು, ಅಲ್ಲದೆ ಅದು ಬಿಸಿಯೂಟವೂ ಅಗಲಾರದು, ಕಾರಣ ಬೆಳಿಗ್ಗೆ 6 ಗಂಟೆಗೆ ಸಿದ್ದವಾದ ಆಹಾರ ಮಧ್ಯಾಹ್ನ ನೀಡುತ್ತಿದ್ದೇವೆ ಅಲ್ಲದೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಅವರು ಬಳಸುತ್ತಿಲ್ಲ ಇದರಿಂದ ಅದರಿಂದ ಸಿಗುವ ಅಂಶಗಳು ಮಕ್ಕಳಿಗೆ ಸಿಗಲಾರವು, ಪರೀಕ್ಷಿಸಿದಾಗ ಗುಣಮಟ್ಟವೂ ಸಹ ಕಡಿಮೆ ಎಂದರು, ಅದಕ್ಕೆ ಶಾಸಕರು ಅಡುಗೆ ಕೋಣೆಯ ನಿರ್ಮಿಸಿ ಅಲ್ಲಿ ಅಡುಗೆ ಮಾಡುವ ಬಗ್ಗೆ ಚಿಂತಿಸುವ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಅಧಿಕಾರಿ ಮಂಜುನಾಥ ರೆಡ್ಡಿ ಮಾಹಿತಿ ನೀಡಿ ವಾಡಿಕೆಗಿಂತ ಈ ಬಾರಿ ಮಳೆ ಕಡಿಮೆಯಾಗಿದೆ ಇಲ್ಲಿಯವರೆಗೆ 464 ಹೆಕ್ಟೇರ್ ಹತ್ತಿ, 71 ಹೆ. ಜೋಳ, 10 ಹೆ. ಸಜ್ಜೆ, 25 ಹೆ ತೋಗರಿ ಬಿತ್ತನೆಯಾಗಿದೆ ಎಂದರು, ಶಾಸಕರು ರೈತರಿಗೆ ಯಾವುದೇ ಕಾರಣಕ್ಕು ಕಳೆಪೆ ಬೀಜಪೂರೈಕೆಯಾಗದಂತೆ ಕ್ರಮವಹಿಸಿಎಂದರು, ರೈತ ಸಂಪರ್ಕ ಕೇಂದ್ರ ನಿರ್ಮಾಣ ತಡವಾದ ಬಗ್ಗೆ ಭೂಸೇನಾ ನಿಗಮದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ತೋಟಗಾರಿಕೆ ಇಲಾಖೆಯ ಅಧಿಕಾರಿ ನಾಯ್ಕ ಅವರಿಂದ ಮಾಹಿತಿ ಪಡೆದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಸಕ ಎನ್.ಕೆ. ವೆಂಕಟೇಶ್, ಪಶುಸಂಗೋಪನಾ ಇಲಾಖೆಯ ಡಾ. ವಲಿಭಾಷಾ,    ಪರಿಶಿಷ್ಟ ಪಂಗಡ ಇಲಾಖೆ ರವಿಕುಮಾರ  ಮಾಹಿತಿಯನ್ನು ಪಿ.ಪಿ.ಟಿ ರೂಪದಲ್ಲಿ ಅಚ್ಚುಕಟ್ಟಾಗಿ ವರದಿ ನೀಡಿದ್ದನ್ನು ಖುದ್ದು ಶಾಸಕರು ಪರಿಶೀಲಿಸಿ ಈ ರೀತಿ ಉತ್ತಮ ವರದಿ ನೀಡಿದರೆ ಕೆ.ಡಿ.ಪಿ ಸಭೆಯನ್ನು ಕೇವಲ ಅರ್ಧ ದಿನದಲ್ಲಿ ಮುಗಿಸಬಬಹುದು, ಕಡ್ಡಾಯವಾಗಿ ಎಲ್ಲಾ ಇಲಾಖೆಯವರು ಈ ರೀತಿ ವರದಿ ನೀಡಬೇಕು, ಅದು ಸತ್ಯವಾಗಿರಬೇಕು, ಎನ್.ಕೆ. ವೆಂಕಟೇಶ್ ಮಾಹಿತಿ ನೀಡಿ ಎಲ್ಲಾ ವಸತಿ ನಿಲಯಗಳಿಗೆ ಅರ್ಜಿ ಅಹ್ವಾನಿಸಿದ್ದು ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು, ಇನ್ನೂ ಅಂಬೇಡ್ಕರ ಭವನ, ಅಪೂರ್ಣವಾದಬಗ್ಗೆ, ಜಾಗದ ಸಮಸ್ಯೆಯ ಬಗ್ಗೆ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿ ಎನ್.ಎಂ.ಡಿ.ಸಿ. ಗಣಿ ಕಂಪನಿಯಲ್ಲಿ ಕನ್ವೇಯರ್ ಬೆಲ್ಟ ಮೂಲಕ ಅದಿರು ಸಾಗುವ ಬಗ್ಗೆ ಸರಿಯಾದ ಮಾಹಿತಿ ನೀಡಿ ಅದರ ಸೂಕ್ತ ಲೆಕ್ಕ ಮಾಡಿ ಎಂದರು, ಇನ್ನೂ ಕಾರ್ಮಿಕ ಇಲಾಖೆ ಅಧಿಕಾರಿ ಮಾಹಿತಿ ನೀಡದೇ ಇದ್ದುದಕ್ಕೆ ಗರಂ ಅದರು, ಪೋಲಿಸ್ ಇಲಾಖೆ ಪಿ.ಎಸ್.ಐ. ಕಾಳಿಂಗಪ್ಪ ಮಾಹಿತಿ ನೀಡಿ ವೀಲಿಂಗ್ ಮಾಡುವವರ ವಿರುದ್ದ 550 ಕೇಸು, 2.75 ಲಕ್ಷ ದಂಡ,  ಬಾರಿವಾಹನ 350ಕೇಸು 1.7 ಲಕ್ಷ ದಂಡ, ಗೂಡ್ಸ್ ವಾಹನ 50 ಕೇಸು, ಪಾರ್ಕಗಳಲ್ಲಿ ಇತರ ಕಡೆಗಳಲ್ಲಿ ಗಲಾಟೆ ಬಹಿರಂಗ ಕುಡಿತದ ಒಟ್ಟು 200 ಕೇಸುಗಳನ್ನು ದಾಖಲಿಸಿದ್ದು ಇನ್ನೂ ಸಹ ವೀಲ್ಹಿಂಗ್ ಮಾಡುವವರ ಮೇಲೆ ನಿಗಾ ಇಟ್ಟುವರ ಬಗ್ಗೆ ತಿಳಿಸಿದರು.
ಶಾಸಕರು ಮಾತನಾಡಿ ತಾಲೂಕಿನಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಚೋರನೂರು ಹೋಬಳಿಯಲ್ಲಿ ಐ.ಟಿ.ಐ. ಕಾಲೇಜು, ಕೈಗಾರಿಕಾ ಪ್ರದೇಶ ಅಭಿವೃದ್ದಿ ಅರಣ್ಯ ಇಲಖೆಯ ಸಹಯೋಗದಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ದಿ, ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಮತ್ಸ್ಯ ಕೇಂದ್ರ ಸ್ಥಾಪನೆ ಮಾಡಲು ಯೋಜನೆ ರೂಪಿಸಲು ತಿಳಿಸಿದರು.
ಯಾವ ಇಲಾಖೆ ಅಧಿಕಾರಿಗಳು ಅಗಮಿಸದೇ ಇದ್ದರು ಕ್ರಮವಹಿಸಲು ಕಾರ್ಯನಿರ್ವಾಹಕ ಅಧಿಕಾರಿಷಡಾಕ್ಷರಿ ಅವರಿಗೆ ತಿಳಿಸಿದರು.
ಸಭೆಯಲ್ಲಿ ತಾಲುಕಿನ ಎಲ್ಲಾ ಅಧಿಕಾರಿಗಳು ಹಾಜರಿದ್ದರು, ತಹಶೀಲ್ದಾರ್, ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಿ ತಮ್ಮ ಇಲಾಖೆಯ ಮಾಹಿತಿಯನ್ನು ಸಹ ವೇದಿಕೆಯಲ್ಲಿಯೇ ನೀಡಿದರು.
ಸಭೆಯಲ್ಲಿ ಆರೋಗ್ಯ ಇಲಾಖೆ ಟಿ.ಹೆಚ್.ಓ, ಡಾ. ಭರತ್, ಡಾ. ರಾಮಶೆಟ್ಟಿ ಮಾಹಿತಿ ನೀಡಿದರು, ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅಧಿಕಾರಿ ಅನಿಲ್ ಕುಮಾರ್ ಪ್ರಗತಿಯ ಮಾಹಿತಿ ನೀಡಿದರು. ಡಾ. ವಲೀಭಾಷಾ ಪಶುಸಂಗೋಪನಾ ಇಲಾಖೆಯಲ್ಲಿ ಮೇವು ಹಾಗೂ ಚಿಕಿತ್ಸೆ ಬಗ್ಗೆ ವಿವರಿಸಿದರು. ಸಣ್ಣ ನೀರಾವರಿ ಇಲಾಖೆ ರಾಮಾಂಜಿನಿ ಜಿ.ಎಲ್.ಹಳ್ಳಿ ಕೆರೆ , ಇತರ ಕೆರೆಗಳ ಅಭಿವೃದ್ದಿ ವಿವರಿಸಿದರು, ಪಿ.ಡಬ್ಲ್ಯೂಡಿ ಲಕ್ಷ್ಮೀಪುರ ಗ್ರಾಮದ ಅಂಗನವಾಡಿ ಕೇಂದ್ರದ ಬಗ್ಗೆ ಶೇಕ್ ಅಹ್ಮದ್, ಹಾಗೂ ಇತರರಿಗೆ ಕ್ರಮಕೈಗೊಳ್ಳಲು ತಿಳಿಸಿದರು, ಸಿ.ಡಿ.ಪಿ.ಓ ಎಳೆ ನಾಗಪ್ಪ ಶಿಥಿಲ ಗೊಂಡ ಕೇಂದ್ರಗಳು, ಬಾಡಿಗೆ ಕಟ್ಟಡಗಳ ವರದಿ ಸಲ್ಲಿಸಿದರು. ಅರಣ್ಯ ಇಲಾಖೆ ಮಂಜುನಾಥ, ಉಮೇಶ್ ತಿಳಿಸಿದರು,

One attachment • Scanned by Gmail