ಶಾಲೆಗಳಿಗೆ ತೀವ್ರಗತಿಯಲ್ಲಿ ಪಠ್ಯ ಪುಸ್ತಕಗಳ ವಿತರಣೆ

ಆಳಂದ:ಸೆ.25:ಕೋವಿಡ-19ರ ಹಿನ್ನಲೆಯಲ್ಲಿ ಶಾಲೆಗಳು ಆರಂಭ ವಾಗದ ಪ್ರಯುಕ್ತ ಪಠ್ಯ ಪುಸ್ತಕಗಳು ಸರಬರಾಜು ಆಗಿರುವುದಿಲ್ಲ. ಸದ್ಯದಲ್ಲಿ ಪಠ್ಯ ಪುಸ್ತಕಗಳು ಲಭ್ಯ ವಿದ್ದು. ಆಯಾ ಆಯಾ ಶಾಲೆಗಳಿಗೆ ತ್ರೀವಗತಿಯಲ್ಲಿ ವಿತರಣೆ ಕಾರ್ಯ ನಡೆದಿದೆ ಎಂದು ಪಠ್ಯ ಪುಸ್ತಕದ ವಿಭಾಗದ ನೋಡಲ ಅಧಿಕಾರಿ ಪಂಚಪ್ಪ ಪಾಟೀಲ ಅವರು ತಿಳಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರಿ, ಅನುದಾನಿತ 1 ರಿಂದ 10ನೇ ತರಗತಿ ವರೆಗೆ ಉಚಿತವಾಗಿ 3,32,653 ಪಠ್ಯ ಪುಸ್ತಕಗಳ ಒಟ್ಟು ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ 3,06836 ಪಠ್ಯ ಪುಸ್ತಕಗಳು ಲಭ್ಯವಿದ್ದು. ಆಯಾ ಆಯಾ ಸಿಆರ್‍ಪಿ ವ್ಯಾಪ್ತಿಯ ಶಾಲೆಗಳ ಮುಖ್ಯಗುರುಗಳನ್ನ ಕರೆಸಿ ಎಸ್.ಎ.ಟಿ.ಎಸ್ ನಲ್ಲಿ ಇರತಕ್ಕತಂಹ ಮಕ್ಕಳ ಅನುಗುಣ ಪಾತವಾಗಿ. ಪಠ್ಯ ಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ. ಅನುದಾನ ರಹಿತ ಶಾಲೆಗಳಿಗೆ ಒಂದು ರಿಂದ ಹತ್ತನೇ ತರಗತಿ ವರೆಗೆ ಸರಕಾರ ನಿಗದಿ ಮಾಡಿದ ದರದಂತೆ ಶೇ 65 ರಷ್ಟು ಪಠ್ಯ ಪುಸ್ತಕಗಳು ಲಭ್ಯ ವಿದ್ದು ಅವರಿಗೂ ಕೂಡಾ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.


2020ನೇ ಸಾಲಿನಲ್ಲಿ ಶೇ 10 ರಂತೆ ಖಾಸಗಿ ಅನುದಾನ ರಹಿತ ಶಾಲೆಗಳಿಂದ 1 ರಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಗಳ ಈಗಾಗಲೇ ಎಸ್.ಎ.ಟಿ.ಎಸ್ ನಲ್ಲಿ ಹಣ ಸಂದಾಯ ಮಾಡಲಾಗಿದೆ. ಖಾಸಗಿ ಅನುದಾನ ರಹಿತ ಶಾಲೆಯವರು ಪಠ್ಯ ಪುಸ್ತಕ ಪಡೆದಿರುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿ ಇರುವುದರಿಂದ ಈಗಾಗಲೇ ಸಂದಾಯ ಮಾಡಿರುವ ಹಣದಲ್ಲಿ ಪಠ್ಯ ಪುಸಕ್ತಗಳು ವಿತರಿಸಬೇಕು.

ಶ್ರೀ ಮುರುಘೇಂದ್ರ ಕೋರಣೇಶ್ವರ ಸ್ವಾಮಜೀ ಅವರು ಖಜೂರಿ

ಅಧ್ಯಕ್ಷರು ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ, ಆಳಂದ