ಶಾಲೆಗಳಿಗೆ ತಾಪಂ ಇಓ ಧಿಡೀರನೆ ಭೇಟಿ, ಪರಿಶೀಲನೆ

ಜಮಖಂಡಿ :ಜ.2: ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಕೋವಿಡ್ ನಿಯಮಗಳು ಕಟ್ಟು ನಿಟ್ಟಾಗಿ ಪಾಲಿಸುವಂತೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆಭೀದ ಗದ್ಯಾಳ ಸೂಚನೆ ನೀಡಿದರು

ತಾಲೂಕಿನ ಸಿದ್ದಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢಿರನೆ ಬೇಟಿ ನೀಡಿ ಶಾಲಾ ಕೋಠಡಿಗಳು, ಅಡಿಗೆ ಕೊಣೆ, ಗ್ರಂಥಾಲಯ ಹಾಗೂ ಗಣಕ ಯಂತ್ರ ಕೊಠಡಿ ಸೇರಿದಂತೆ ಪರಿಶೀಲನೆ ನಡೆಸಿದರು. ಶಿಕ್ಷಕರಿಂದ ಮಾಹಿತಿ ನೀಡುತ್ತಿದ್ದಂತೆ ಮೊದಲನೆ ದಿನಕ್ಕೆ 150 ಮಕ್ಕಳು ಹಾಜರಿರುವಾಗ ಮುಂದುವರೆದು ಮಕ್ಕಳ ಸಂಖ್ಯೆ ಹೆಚ್ಚಿಗೆ ಆಗುವ ಸಂಭವ ಇದ್ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಥಳದ ಅಭಾವ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು, ಕೋವಿಡ್‍ನಿಂದಾಗಿ ಸುಮಾರು 9 ತಿಂಗಳ ನಂತರ ಶಾಲೆಗಳು ಪ್ರಾರಂಭವಾಗುತ್ತಿದ್ದರಿಂದ ಮಕ್ಕಳ, ಪಾಲಕರಲ್ಲಿ ಆತ್ಮ ಸ್ಥೈರ್ಯ ತುಂಬುವದರೊಂದಿಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಇಲಾಖೆಯ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಎಲ್ಲ ಸುರಕ್ಷಿತಾ ಕ್ರಮ ಕೈಗೊಳ್ಳಲು ಸೂಚಿಸಿದರು ಈ ಸಂದರ್ಭದಲ್ಲಿ ತಾಪಂ ಪ್ರಭಾರಿ ಸಹಾಯಕ ನಿರ್ದೇಶಕರಾದ ಕೆ.ಬಿ.ಕೀಜಿ, ಮುಖ್ಯ ಗುರುಮಾತೆ ಶ್ರೀಮತಿ ಮಾದರ, ಸಹ ಶಿಕ್ಷಕರಾದ ಗಿರೀಶ ಮನಗೂಳಿ ಪಿ.ಡಿ.ಓ ಎನ್.ಬಿ.ದೇಸಂಗಿ ಇನ್ನಿತರ ಸಿಬ್ಬಂದಿ ಇದ್ದರು.

ಶಾಲೆಗೆ ಭೆಟಿ ನೀಡಿ ಎಲ್ಲ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಶೌಚಾಲಯ ಸಮಸ್ಯೆಯನ್ನು ಶಿಕ್ಷಕರು ಗಮನಕ್ಕೆ ತಂದಿದ್ದು ಶೀಘ್ರವಾಗಿ ಸರಿಪಡಿಸುವಂತೆ ಪಿ.ಡಿ.ಓ ರವರಿಗೆ ಸೂಚಿಸಿದ್ದೇನೆ. (ಆಬೀದ್ ಗದ್ಯಾಳ ಇಓ ತಾಪಂ ಜಮಖಂಡಿ)