
ದೇವದುರ್ಗ,ಆ.೧೩-
ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಬಿಇಒ ಎಚ್. ಸುಖದೇವ್‌ಗೆ ಜೆಎಂಎಫ್‌ಸಿ ನ್ಯಾಯಾಧೀಶ ಬಾಳಸಾಹೇಬ್ ವಡವಡೆ ಸೂಚನೆ ನೀಡಿದರು.
ಪುರಸಭೆ ವ್ಯಾಪ್ತಿಯ ಆರೇರ್‌ದೊಡ್ಡಿ ಹಾಗೂ ಬೂದೆಪ್ಪ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ಇವೆ. ನೀವು ಏನ್ ಮಾಡುತ್ತಿದ್ದೀರಿ. ಸಮಸ್ಯೆ ಇರುವ ಶಾಲೆಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಬೇಕು ತಾಕೀತು ಮಾಡಿದರು.
ಹಲವು ಶಾಲೆಗಳಲ್ಲಿ ನೀರಿದ್ದರೂ ಶುದ್ಧವಾಗಿಲ್ಲ. ಶುದ್ಧ ನೀರು ಕುಡಿಯುವುದು ಮಗುವಿನ ಹಕ್ಕು. ಪ್ರತಿ ಮಗುವಿಗೂ ಶುದ್ಧ ಕುಡಿವ ನೀರು ಒದಗಿಸಬೇಕು. ಶೌಚಗೃಹ ದುರಸ್ತಿ ಮಾಡಿ, ಸಮರ್ಪಕವಾಗಿ ಬಳಕೆಯಾಗುವಂತೆ ನೀರು, ನೆರಳು ಹಾಗೂ ಬಾಗಿಲು ಸರಿಯಾಗಿ ಮಾಡಬೇಕು.
ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ತಯಾರಿ ಉಣಬಡಿಸಬೇಕು. ಶಾಲಾವಾರಣ ಸ್ವಚ್ಛತೆ, ವಿದ್ಯುತ್, ಸುಣ್ಣ ಬಣ್ಣ ವ್ಯವಸ್ಥೆ ಮಾಡಬೇಕು. ಮಳೆಗೆ ಸೋರದಂತೆ ಶಾಲೆಗಳನ್ನು ರಕ್ಷಣೆ ಮಾಡಬೇಕು ಎಂದು ಸೂಚಿಸಿದರು.
ಮೆಚ್ಚುಗೆ:
ಆರೇರ್ ದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರಕ್ಕೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾವರಣದಲ್ಲಿ ಉತ್ತಮವಾದ ಗಿಡಗಳನ್ನು ಬೆಳೆಸಿ ಸ್ವಚ್ಛತೆ ಕಾಪಾಡಿಕೊಂಡಿದ್ದೀರಿ. ಮಕ್ಕಳ ಆಟ ಆಡಲು ವ್ಯವಸ್ಥೆ, ಬಿಸಿಯೂಟ ಸೇವಿಸಲು ಹಾಸನ ವ್ಯವಸ್ಥೆ, ವಿವಿಧ ಚಿತ್ರಗಳ ಬಿಡಿಸಿ ಅಂದವಾಗಿ ಕಾಣುವಂತೆ ಶಾಲೆ ಇರಿಸಿಕೊಂಡಿದ್ದಕ್ಕೆ ಬಾಳಸಾಹೇಬ್ ವಡವಡೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಇಒ ಎಚ್.ಸುಖದೇವ್, ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಸಿಆರ್‌ಪಿ ಬಾಬು ಹಡಗಲಿ, ಮಂಜುನಾಥ, ಶಿಕ್ಷಕರಾದ ಗೋವಿಂದ್ ರಾಜ್, ಇತರರಿದ್ದರು.