ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕøತಿವಾಗಿ ಬೆಳೆಯುವುದನ್ನು ತಿಳಿಸಿಕೊಡುತ್ತದೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.11- ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಾಯಿ, ತಂದೆ ಯವರು ಮಕ್ಕಳಿಗೆ ಸಂಸ್ಕಾರಗಳನ್ನು ಕಲಿಸುವ ಕೆಲಸಗಳನ್ನು ಮಾಡುತ್ತಾರೆ. ಶಾಲೆಗಳಲ್ಲಿ ಸಂಸ್ಕಾರದ ಜೊತೆಗೆ ಶಿಕ್ಷಣವನ್ನು ಕಲಿಸುವುದರೊಂದಿಗೆ ಸಾಂಸ್ಕøತಿವಾಗಿ ಬೆಳೆಯುವುದನ್ನು ತಿಳಿಸಿಕೊಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ರಾಜೀವ್ ತಿಳಿಸಿದರು.
ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಸಿದ್ಧಾರ್ಥ ಹಿಪೆÇ್ಪೀಕಾಂಪಸ್ ಅಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನರಲ್ಲಿ ಒಂದು ತಪ್ಪು ಭಾವನೆಇದೆ ಮಕ್ಕಳನ್ನು ದೊಡ್ಡ ಶಾಲೆಗಳಿಗೆ ಸೇರಿಸಿದರೆ ಉತ್ತಮ ವಿದ್ಯಾಭ್ಯಾಸ ಸಿಗುತ್ತದೆ ಎಂದು ವಿದ್ಯಾರ್ಥಿಗಳನ್ನು ಚಿಕ್ಕ ಶಾಲೆಗಳಲ್ಲಿಯು ಹೆಚ್ಚು ಅಂಕ ಪಡೆಯ ಬಹುದು ಮಕ್ಕಳಿಂದ ಉತ್ತಮ ಶಿಕ್ಷಣವನ್ನು ನೀಡಿದರೆ ಎಲ್ಲಾ ಶಾಲೆಯ ಮಕ್ಕಳು ಹೆಚ್ಚು ಅಂಕ ಪಡೆಯ ಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯಿತ್ ಅಧ್ಯಕ್ಷ ಹಾಗೂ ನಾಗಸೇನಾ ಸೋಷಿಯಲ್ ಟ್ರಸ್ಟ್ ಕಾರ್ಯದರ್ಶಿ ಎಸ್,ಮಹದೇವಯ್ಯ ಮಾತನಾಡಿ ಮಕ್ಕಳಿಗೆ ಮಾತೃಭಾಷÉಯ ಜೊತೆಯಲ್ಲಿ ಅಂಗ್ಲ ಭಾಷÉಯನ್ನು ಕಲಿಸುವುದರಿಂದ ಜ್ಞಾನವು ಬೆಳೆಯುತ್ತದೆ. ಪೆÇೀಷಕರು ಮಕ್ಕಳಿಗೆ ಸಮಾಜಕ್ಕೆ ಅನುಕೂಲವಾಗುವ ಮಾರ್ಗಗಳನ್ನು ತಿಳಿಸಿಕೊಡಬೇಕು ಮೊಬೈಲ್ ಪೆÇೀನ್‍ಗಳಿಂದ ದೂರವಿರಲು ಎಚ್ಚರ ವಹಿಸಬೇಕು. ಚಿಕ್ಕ ಮಕ್ಕಳಿಗೆ ಕಲಿಸುವ ಸಂಸ್ಕಾರ ಅವರ ಮುಂದಿನ ಜೀವನಕ್ಕೆ ಹಾದಿಯಾಗಲಿದೆ. ಹಿಪೆÇ್ಪೀ ಕಾಂಪಸ್ ಅಂಗ್ಲ ಮಾಧ್ಯಮ ಶಾಲೆಯು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸುವ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ ಹೇಳಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಸಿದ್ಧಾರ್ಥ ಪದವಿ ಕಾಲೇಜು ಪ್ರಾಂಶುಪಾಲರಾದ ಮಹದೇವಸ್ವಾಮಿ.ಎನ್. ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆಗಳಿಗೆ ಹೋಗುವವರು ಹೆಚ್ಚಾಗಿದ್ದಾರೆ ಅವರಿಗೆ ನಮ್ಮ ಜಿಲ್ಲೆ ಎನ್ನುವ ಮನೋಭಾವ ಬೆಳೆಯಬೇಕು. ಎಲ್ಲಾ ಕಾಲೇಜುಗಳಲ್ಲಿಯೂ ಶಿಕ್ಷಣ ಒಂದೇ ಇರುತ್ತದೆ.
ಮನೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಶಿಕ್ಷಣ ಕಲಿತರೆ ನಿಮ್ಮ ಕುಟುಂಬದ ಸದಸ್ಯರು ಸಂತೋಷ ಪಡುತ್ತಾರೆಎಂದು ಹೇಳಿದರು.
ಸಿದ್ಧಾರ್ಥ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ರಂಗಸ್ವಾಮಿ, ಸಿದ್ಧಾರ್ಥ ಹಿಪೆÇ್ಪೀಕಾಂಪಸ್ ಮುಖ್ಯ ಶಿಕ್ಷಕಿ ಶೃತಿ.ಪಿ, ಮಾತನಾಡಿದರು.
ಈ ಸಂದರ್ಭದಲ್ಲಿ ಎನ್.ಶಿವಕುಮಾರ್, ಮಹೇಶ್, ಮಹೇಶ್‍ಕುದರ್, ಸಿ.ಕೆ.ಮಂಜುನಾಥ್,ಉದ್ಯಮಿ ಮಹದೇವು,ಶ್ರೀರಾಮಚಂದ್ರ ವಿದ್ಯಾಸಂಸ್ಥೆ ಮಹೇಶ್, ಹಿಪೆÇ್ಪೀಕಾಂಪಸ್ ಶಿಕ್ಷಕರಾದ ಮಂಜು, ಶಶಿಕಲಾ, ಸುಪ್ರಿಯ, ಶೋಭ, ಪವಿತ್ರ ಹಾಜರಿದ್ದರು.ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.