ಶಾಲೆಗಳಲ್ಲಿ ಅಗ್ನಿ ದುರಂತ ಸಾಮಾಗ್ರಿಗಳು ಕಡ್ಡಾಯ ; ಬಿ ಸಿ ಸಿದ್ದಪ್ಪ 

ಹರಿಹರ. ಜು.18 ; ಶಾಲಾ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಕ್ರಮಗಳನ್ನು ಅಳವಡಿಸದೇ ಇದ್ದಲ್ಲಿ ಮಾನ್ಯತೆ ನವೀಕರಣ ಮಾಡುವಂತಿಲ್ಲ   ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಹೇಳಿದರು ನಗರದ ಗುರು ತಿಪ್ಪೇರುದ್ರ ಸ್ವಾಮಿ ಪ್ರೌಢಶಾಲೆಗೆ ಸುರಕ್ಷತಾ ಸಾಮಗ್ರಿಗಳ ಅಳವಡಿಕೆ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಖಾಸಗಿ ಅನುದಾನಿತ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿಗಳು ಕ್ರಮ ವಹಿಸಲು ಸೂಚಿಸಲಾಗಿದೆ ಅದರಂತೆ ಹರಿಹರ ನಗರದಲ್ಲಿ  ಮೊದಲಬಾರಿಗೆ ಅಗ್ನಿ ಸುರಕ್ಷತೆ ಕಟ್ಟಡ ಸುರಕ್ಷತೆ ಅಳವಡಿಸಿದ ಮೊದಲ ಶಾಲೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಅಳವಡಿಸಿ ಸುರಕ್ಷತಾ ಬಗ್ಗೆ ಹೆಚ್ಚು ಗಮನ ವಹಿಸಿದ್ದಾರೆ ಎಂದರು. ಪ್ರತಿ ಮಹಡಿಯಲ್ಲೂ ಅಗ್ನಿ ನಂದಕ ಉಪಕರಣ ಹಾಕುವುದು.ಸುರಕ್ಷತಾ ಪ್ಯಾರಾಪಿಟ್ ವಾಲ್ ಏರಿಕೆ.ಶಾಲೆಯಲ್ಲಿ ಸಾಧ್ಯವಾದಷ್ಟು ಕಡೆ ಮೆಟ್ಟಿಲು ಅಳವಡಿಕೆ.ಒಂದನೇ ಮಹಡಿ ಹೊರತು ಪಡಿಸಿ ತೆರಳದ.ಸ್ಥಳದಲ್ಲಿಸೇಫ್ಟಿನೆಟ್ಅಳವಡಿಸುವುದು.ಅಡುಗೆ ಮನೆಗಳಲ್ಲಿದ್ದಲ್ಲಿ ಫೈರ್ ಅಂಡ್ ಸ್ಮೋಕ್ ಡಿಟೆಕ್ಟರ್ ಅಳವಡಿಸುವುದು.ಗ್ಯಾಸ್ ಲೀಕ್ ಡಿಟೆಕ್ಟರ್ ಅಳವಡಿಕೆ ಮಾಡುವುದು.ಫೈರ್ ಎಕ್ಸಿಟ್ ಪ್ಲಾನ್.ಅಗ್ನಿ ಸುರಕ್ಷತಾ ಡ್ರಿಲ್ ಮಾಡಿಸುವುದು.ಅಗ್ನಿ ನಂದಕ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿ,ಶಾಲೆಗಳಲ್ಲಿ ಯಾವುದೇ ಸ್ಫೋಟಕ ಸಂಗ್ರಹಿಸುವಂತಿಲ್ಲ.ಪ್ರಯೋಗಾಲಯದಲ್ಲಿ ಸ್ಫೋಟಕ ರಾಸಾಯನಿಕ ಇಟ್ಟಲ್ಲಿ ಅಲ್ಲಿ ಸ್ಥಳ ಪರಿಶೀಲಿಸಿ ಪ್ರತ್ಯೇಕ ಅಗ್ನಿ ನಂದಕ ಉಪಕರಣ ಅಳವಡಿಸುವುದು.ಅಗ್ನಿ ದುರಂತ ಆಗುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು   ಅನುಸರಿಸುವುದಕ್ಕೆ  ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ  ಆದೇಶವನ್ನು ಹೊರಡಿಸಿದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗುತ್ತದೆ ಖಾಸಗಿ ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಉಪಕರಣ ಅವಳಡಿಕೆ ಸಂಬಂಧ ಸರ್ಕಾರ ರಾಜ್ಯದ ಅಗ್ನಿ ಶಾಮಕ ಠಾಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಸಲಹಾ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ ಎಂದರು ಗುರು ತಿಪ್ಪೇರುದ್ರಸ್ವಾಮಿ  ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಿ ಬಿ ರೇವಣ್ಣ ನಾಯ್ಕ್ .ಶಿವಮೂರ್ತಿ .ಬಿ ಇ ಓ ಕಚೇರಿಯ ಸಿಬ್ಬಂದಿ ವರ್ಗ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಿಶೀಲನೆ ಸಂದರ್ಭದಲ್ಲಿ ಇದ್ದರು.

Attachments area

Attachments area