ಶಾಲಾ ಹಂತದಲ್ಲೇ ಮಕ್ಕಳಿಗೆ ತಂಬಾಕಿನ ಬಗ್ಗೆ ಅರಿವು ಅಗತ್ಯ

ಕೆ.ಆರ್.ಪೇಟೆ:ಮಾ:29: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ತಂಬಾಕಿನಿಂದಾಗುವ ಪರಿಣಾಮಗಳನ್ನು ಮನವರಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಅವುಗಳ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಗ್ರಾಮಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು.
ಅವರು ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ವತಿಯಿಂದ ಏರ್ಪಡಿಸಿದ್ದ ತಂಬಾಕು ವ್ಯಸನ ಮುಕ್ತ ಜಿಲ್ಲೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ತಂಬಾಕುಸೇವನೆ ಹಲವಾರು ಕಾಯಿಲೆಗಳಿಗೆ ಮಾರಕವಾಗಿದ್ದು ಇದರ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲು ನಿಮ್ಮನಿಮ್ಮ ಮನೆಗಳಲ್ಲಿ ಹಿರಿಯರಿಗೆ ತಿಳಿಸಬೇಕು. ಅವರನ್ನು ವ್ಯಸನಕುಕ್ತರನ್ನಾಗಿ ಮಾಡಲು ಅವರುಗಳ ಮನವೊಲಿಸಬೇಕು. ತಂಬಾಕಿನ ಸೇವನೆಯಿಂದಾಗುವ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಂಬಾಕು ಸೇವನೆಯಿಂದ ಉಂಟಗುವ ಕಾಯಿಲೆಗಳ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಉತ್ತಮವಾಗಿ ಚಿತ್ರಬಿಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಧರ್ಮೇಂದ್ರ, ನಾಗೇಂದ್ರ, ನವೀನ್, ಮುಖ್ಯ ಶಿಕ್ಷಕ ಹೆಚ್.ಎಸ್.ಕೃಷ್ಣ, ಶಿಕ್ಷಕರಾದ ವಜ್ರಪ್ರಸಾದ್, ಜಗದೀಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.