ಶಾಲಾ ಸಮಯಕ್ಕೆ ಬಸ್ ಓಡಿಸಲು ಮನವಿ

ಅಫಜಲಪುರ:ಸೆ.4: ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಮಾದನ ಹಿಪ್ಪರಗಾ ಮಾರ್ಗವಾಗಿ ಆಳಂದ ತಾಲೂಕಿಗೆ ಬೆಳಗಿನ ಸಮಯ ಬಸ್ ಓಡಿಸಬೇಕು ಎಂದು ಶಿಕ್ಷಕ ಬಾಪುಗೌಡ ಬಿರಾದಾರ ಸಾರಿಗೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ದಿನ ನಿತ್ಯ ಅಫಜಲಪುರ ತಾಲೂಕಿನಿಂದ ಮಾದನ ಹಿಪ್ಪರಗಾ ಮಾರ್ಗವಾಗಿ ಆಳಂದ ತಾಲೂಕಿಗೆ ಅನೇಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೋಗಿ ಬರುತ್ತಾರೆ. ಆದರೆ ಶಾಲಾ ಸಮಯಕ್ಕೆ ಬಸ್ ಇಲ್ಲದ ಕಾರಣ ತರಗತಿಗೆ ಹಾಜರಾಗಲು ವಿಳಂಬವಾಗುತ್ತಿದೆ. ಹೀಗಾಗಿ ಶಾಲಾ ಸಮಯಕ್ಕೆ ಬಸ್ ಓಡಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವಲಿಂಗಪ್ಪ ದೊಡ್ಮನಿ, ಕಿರಣ ಬಿಂಗೆ, ಮಲ್ಲು ರೋಡಗಿ, ಸುರೇಶ ದುದ್ದಗಿ, ಶಿವು ಪತ್ತಾರ , ಶ್ರೀಕಾಂತ ಸೇರಿದಂತೆ ಅನೇಕರಿದ್ದರು.