ಶಾಲಾ ಸಂಸತ್ ರಚನೆಗೆ ಚುನಾವಣೆಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿನಿಯರು

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೫: ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಶುಕ್ರವಾರ ಶಾಲಾ ಸಂಸತ್ ರಚನಾ ಪ್ರಕ್ರಿಯೆ ನಡೆಯಿತು.
ಶಾಲೆಯ ವಿದ್ಯಾರ್ಥಿನಿಯರು ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾನ ಮಾಡಿದರು.ಶಾಲಾ ಸಂಸತ್ ರಚನೆ ಮಾಡಿಕೊಳ್ಳಲು ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 8,9,10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮತಗಟ್ಟೆಗಳ ಕೊಠಡಿಗಳಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು. ಶಾಲಾ ಆವರಣದಲ್ಲಿ ಸೇರಿದ್ದ ವಿದ್ಯಾರ್ಥಿನಿಯರು ಆಧಾರ್ ಕಾರ್ಡ್ ಹಿಡಿದು ಸಾಲುಗಟ್ಟಿ ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆ ಮೂಡಿಸುವ ಹಾಗೂ ಭಾವಿ ಮತದಾರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುವುದು ಮತ್ತು ಭಾವಿ ಮತದಾರರಲ್ಲಿ ಮತದಾನ ಪ್ರಕ್ರಿಯೆ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ತಿಳಿಸಿ, ಮತದಾನ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಶಾಲೆಯಲ್ಲಿ ಅಣಕು ಮತದಾನ ಪ್ರದರ್ಶನ ಮಾಡಲಾಯಿತು.ಮೊದಲನೇ ಮತಗಟ್ಟೆಯಲ್ಲಿ 8 ನೇ ತರಗತಿ ವಿದ್ಯಾರ್ಥಿಗಳಿಂದ ಮತದಾನ ಮಾಡಲಾಯಿತು. ಒಟ್ಟು 14 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಒಬ್ಬ ವಿದ್ಯಾರ್ಥಿ 5 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಯಿತು. 8ನೇ ತರಗತಿಯ ಮತಗಟ್ಟೆ ಅಧಿಕಾರಿಯಾಗಿ ಗಣಿತ ಶಿಕ್ಷಕಿ ಹೆಚ್.ಟಿ. ಅನಿತಾ, ಸಹಾಯಕಯ ಮತಗಟ್ಟೆ ಅಧಿಕಾರಿಯಾಗಿ ಕನ್ನಡ ಭಾಷೆ ಶಿಕ್ಷಕಿ ಜಿ.ಎಲ್. ಮುಕ್ತಾಯಿ, 1ನೇ ಮತಗಟ್ಟೆ ಅಧಿಕಾರಿಯಾಗಿ ಸಂಸ್ಕøತ ಭಾಷಾ ಶಿಕ್ಷಕಿ ಶ್ವೇತಾ ಆರ್ ಭಟ್, 2ನೇ ಮತಗಟ್ಟೆ ಅಧಿಕಾರಿಯಾಗಿ ಸಮಾಜ ವಿಜ್ಞಾನ ಭಾಷೆ ಶಿಕ್ಷಕಿ ಫಹಿಮುನ್ನೀಸಾ, ವೀಕ್ಷಕರಾಗಿ ಹಿಂದಿ ಭಾಷೆ ಶಿಕ್ಷಕ ಆರ್.ಎಂ. ಮಹಮೂದ್ ಖಾನ್ ಇದ್ದರು.ಎರಡನೇ ಮತಗಟ್ಟೆಯಲ್ಲಿ 9 ನೇ ತರಗತಿ ವಿದ್ಯಾರ್ಥಿಗಳಿಂದ ಮತದಾನ ಮಾಡಲಾಯಿತು. ಒಟ್ಟು 15 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಭಾಗವಹಿಸಿದು,್ದ ಇದರಲ್ಲಿ ಒಬ್ಬ ವಿದ್ಯಾರ್ಥಿ 6 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಯಿತು. 9ನೇ ತರಗತಿಯ ಮತಗಟ್ಟೆ ಅಧಿಕಾರಿಯಾಗಿ ಅಂಗ್ಲ ಭಾಷಾ ಶಿಕ್ಷಕಿ ಗಂಗೂಭಾರತಿ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಗಣಿತ ಶಿಕ್ಷಕಿ ಆರ್. ದೀಪಾ, 1ನೇ ಮತಗಟ್ಟೆ ಅಧಿಕಾರಿಯಾಗಿ ಉರ್ದು ಭಾಷೆ ಶಿಕ್ಷಕಿ ಮೆಹತಾಬ್ ಬೇಗಂ, 2ನೇ ಮತಗಟ್ಟೆ ಅಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಎಸ್. ಯಶೋಧಮ್ಮ, ವೀಕ್ಷಕರಾಗಿ ವಿಜ್ಞಾನ ಶಿಕ್ಷಕ ಸಿ. ಲೋಕೇಶ್ ಇದ್ದರು.