ಶಾಲಾ ಸಂಸತ್ ಉದ್ಘಾಟನೆ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ, ಆ.6: ತಾಲೂಕಿನ ಶಿಗ್ಲಿ ಗ್ರಾಮದ ನವ ಚೇತನ ವಿದ್ಯಾನಿಕೇತನ ಸಂಸ್ಥೆಯ ಶ್ರೀ ಎನ್ ಆರ್ ಗಂಗಾವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ದ್ಯಾಮಣ್ಣನವರು ತೋಟ ದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಶ್ರೀ ಚನ್ನಪ್ಪನವರು ಹುಲಗೂರು ಪೂರ್ವ ಪ್ರಾಥಮಿಕ ಶಾಲೆ ಇವುಗಳ 202324ನೇ ಸಾಲಿನ ಶಾಲಾ ಸಂಸತ್ತು ಉದ್ಘಾಟನೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರು ವಿದ್ಯಾರ್ಥಿಗಳಿಗೆ ಪ್ರತಿದಿನದ ದೇಶದ ಆಗುಹೋಗುಗಳ ಬಗ್ಗೆ ರಾಜಕೀಯ ಪ್ರಜ್ಞೆಯನ್ನು ಮೂಡಿಸಬೇಕು ಇಂದಿನ ಮಕ್ಕಳೇ ಮುಂದಿನ ನಾಗರಿಕರಾಗುವುದರಿಂದ ಅವರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶದ ಇತಿಹಾಸ ರಾಜಕೀಯ ಪರಿಕಲ್ಪನೆಯನ್ನು ಮೂಡಿಸಿದರೆ ಭವಿಷ್ಯತ್ತಿನಲ್ಲಿ ಸತ್ವಜೆಗಳನ್ನು ಪಡೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಮಾತನಾಡಿ ವಿದ್ಯಾರ್ಥಿ ದಶೆಯಲ್ಲಿಯೇ ಮಕ್ಕಳಿಗೆ ದೇಶದ ಸ್ವಾತಂತ್ರ ಹೋರಾಟದ ಮತ್ತು ನಂತರದ ಸಂವಿಧಾನದ ಇತಿಹಾಸವನ್ನು ಹೇಳಬೇಕು ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸತ್ತು ಲೋಕಸಭೆ ರಾಜ್ಯಸಭೆ ವಿಧಾನಸಭೆ ವಿಧಾನ ಪರಿಷತ್ತು ಚುನಾವಣೆ ಮತದಾನ ಇವುಗಳ ಬಗ್ಗೆ ಸಮಗ್ರ ಜ್ಞಾನವನ್ನು ನೀಡಿದಾಗ ಮುಂಬರುವ ದಿನಗಳಲ್ಲಿ ಉತ್ತಮ ನಾಗರಿಕರನ್ನು ಪಡೆಯಲು ಸಾಧ್ಯ ಎಂದರು ಅಲ್ಲದೆ ಮಕ್ಕಳಿಗೆ ಶಾಲೆಯಲ್ಲಿ ಸಂಸ್ಕಾರವನ್ನು ನೀಡಿ ದೇಶದ ಇತಿಹಾಸ ಸಂಸ್ಕೃತಿ ಪರಂಪರೆಗಳ ಬಗ್ಗೆ ಬಿಂಬಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ ಡಾಕ್ಟರ್ ಪಿ ಡಿ ತೋಟದ ಹುಬ್ಬಳ್ಳಿ ಗಂಗಾವತಿ ಸಿಲ್ಕ್ ಪ್ಯಾಲೇಸನ ಮಾಲೀಕರಾದ ಆನಂದ ಕಮತಗಿ ದಂಪತಿಗಳನ್ನು ಹಾಗೂ ನಿವೃತ್ತ ಯೋಧ ರಮೇಶ್ ಕಟ್ಟಿಮನಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ಭಂಡಾರಿ ವಹಿಸಿದ್ದರು ಕಾರ್ಯಕ್ರಮದಲ್ಲಿ ನಾರಾಯಣಪ್ಪ ಹರವಿ ಅಶೋಕ್ ಶಿರಹಟ್ಟಿ ಸೋಮಣ್ಣ ಡಾಣಗಲ್ಲ ಬಸವರಾಜ್ ಹಂಜಿ ಮುಖ್ಯೋಪಾಧ್ಯಯರಾದ ಆರ್ ಎಚ್ ಗದಗ ವಿ ಎಸ್ ಅಣ್ಣಿಗೇರಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಆಡಳಿತ ಮಂಡಳಿ ಸದಸ್ಯರು ಇದ್ದರು.