ಶಾಲಾ ಸಂಸತ್ತು ರಚನೆ 


ಕುಕನೂರು, ಜು.06:  ಸರಕಾರಿ ಪ್ರೌಢಶಾಲೆ ಕುಕನೂರಇಂದು ದಿ.05-08-2023 ರಂದು ಶನಿವಾರ ಮತದಾನ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಶಾಲಾ ಸಂಸತ್ತು ರಚನೆ ಮಾಡಲಾಯಿತು.
ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಪಾಲಾಕ್ಷಾಚಾರ ಬಡಿಗೇರ ಇವರು ಶಾಲಾ ಸಂಸತ್ತು ರಚನೆಯ ನೇತೃತ್ವ ವಹಿಸಿಕೊಂಡಿದ್ದರು.
ನೂತನ ಟೆಕ್ನಾಲಜಿಯ ಮೂಲಕ ಮಕ್ಕಳಿಲು ಇ ವಿ ಎಮ್ ಮಷಿನ್ ಬಳಕೆಯನ್ನು ಮೊಬೈಲ್ ನಲ್ಲಿ ಮಾಡಿ ವೋಟ್ ಮಾಡಿದರು.
ಪ್ರಜಾರಾಜ್ಯ ಪಕ್ಷ, ಗಣರಾಜ್ಯ ಪಕ್ಷ ಹಾಗೂ ಸ್ವತಂತ್ರ ಪಕ್ಷ ಎಂಬ ಮೂರು ಪಕ್ಷದ ಮೂಲಕ 40 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.
ನಾಮಪತ್ರದ ಅರ್ಜಿ ವಿತರಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಅಂತಿಮ ಅಭ್ಯರ್ಥಿಗಳ ಪಟ್ಟಿ, ತರಗತಿವಾರು ಅಭ್ಯರ್ಥಿಗಳ ಪ್ರಚಾರ, ತರಗತಿವಾರು ಮತದಾನ EVM ಮೂಲಕ , ಮತ ಎಣಿಕೆ – ಹೀಗೆ ಚುನಾವಣೆಯ ಸಂಪೂರ್ಣ ಚಿತ್ರಣವನ್ನು ಬಡಿಗೇರ ಸರ್ ಮಕ್ಕಳಿಗೆ ನೀಡಿದರು.
ಮಕ್ಕಳು ಅತ್ಯಂತ ಉತ್ಸಾಹದಿಂದ ಶಾಲಾ ಸಂಸತ್ತು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕರು ಚುನಾವಣಾ ಅಧಿಕಾರಿಯಾಗಿ, ಎಲ್ಲಾ ಶಿಕ್ಷಕರು ಮತಗಟ್ಟೆ ಅಧಿಕಾರಿಯಾಗಿ ಅಚ್ಚುಕಟ್ಟಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದರು. ಶಾಲಾ ಸಂಸತ್ತಿನ  ಫಲಿತಾಂಶ ಹಾಗೂ ಮಂತ್ರಿಮಂಡಲ ರಚನೆ, ಅಧಿಕಾರ ಸ್ವೀಕಾರವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಶಾಲಾ ಪ್ರಕಟಣೆ ತಿಳಿಸಿದೆ