ಶಾಲಾ ಸಂಸತ್ತು ಚುನಾವಣೆ: ವಿಜೇತರಿಗೆ ಪ್ರಮಾಣವಚನ ಬೋದನೆ”

ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ13. ಗ್ರಾಮದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಜು.09 ರಂದು ಶನಿವಾರ ನಡೆದ ವಿದ್ಯಾರ್ಥಿಗಳ ಶಾಲಾಸಂಸತ್ತು ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋದಿಸಿ ಪ್ರಮಾಣಪತ್ರ ವಿತರಿಸಲಾಯಿತು. ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದ ಒಟ್ಟು 15 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಹೆಚ್ಚು ಮತಗಳನ್ನು ಪಡೆದು ಪ್ರಧಾನಮಂತ್ರಿಯಾಗಿ ಎಚ್.ದರ್ಶನ್, ಪರಿಸರ ಮತ್ತು ಸ್ವಚ್ಚತಾ ಮಂತ್ರಿಯಾಗಿ ಕೆ.ದೇವೇಂದ್ರ, ಶಿಕ್ಷಣಮಂತ್ರಿಯಾಗಿ ಎಚ್.ಪ್ರಶಾಂತ, ಆಹಾರ ಪೂರೈಕೆ ಮಂತ್ರಿಯಾಗಿ ಸುರೇಶ, ಸಾಂಸ್ಕೃತಿಕ ಮಂತ್ರಿ ಸಿ.ರಾಘವೇಂದ್ರ, ಕ್ರೀಢಾಮಂತ್ರಿ ಎಚ್.ಸುರೇಶ, ಆರೋಗ್ಯಮಂತ್ರಿ ಹರೀಶ, ಶಿಸ್ತು ಮತ್ತು ಸಮಯಪಾಲನಾ ಖಾತೆ ಮಂತ್ರಿಯಾಗಿ ಮುತ್ತುರಾಜ್ ಇವರು ಪ್ರಮಾಣವಚನ ಸ್ವೀಕರಿಸಿ ಪ್ರಮಾಣಪತ್ರಗಳನ್ನು ಪಡೆದುಕೊಂಡರು. ಇದೇವೇಲೆ ಚುನಾವಣೆ ಎದುರಿಸಿ ಪರಾಭವಗೊಂಡ ವಿದ್ಯಾರ್ಥಿಗಳನ್ನು ಸಹಾಯಕ ಮಂತ್ರಿಗಳನ್ನಾಗಿ ನೇಮಿಸಲಾಯಿತು. ಶಾಲೆಯ ಮುಖ್ಯಗುರು ಕೆ.ವೀರಪ್ಪ ಪ್ರಮಾಣವಚನ ಬೋದಿಸಿ ವಿಜೇತ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗಾಗಿ ಎಲ್ಲಾ ವಿಜೇತ ಮಕ್ಕಳು ಪಾಲ್ಗೊಂಡು ಉತ್ತಮ ಫಲಿತಾಂಶ ತರಲು ಕೈಜೋಡಿಸಬೇಕೆಂದು ವಿಜೇತರರಿಗೆ ಶುಭಕೋರಿದರು. ಸಹಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೋಟೊ. ಶಾಲಾ ಸಂಸತ್ತು ಚುನಾವಣೆಯಲ್ಲಿ ಜಯಗಳಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Attachments area