
ಚನ್ನಮ್ಮನ ಕಿತ್ತೂರು,ಮಾ.12: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಗಾoವ ಅವರಣದಲ್ಲಿರುವ ಶೌಚಾಲಯದ ಬೀಗ ಮುರಿದು ದುಷ್ಕರ್ಮಿಗಳು ಹೈಟೆಕ್ ಶೌಚಾಲಯದ ಉಪಕರಣಗಳನ್ನು ಒಡೆದು ಹಾಕಿದ್ದಾರೆ. ತಾಪಂ ದಿಂದ ಹೊಸದಾಗಿ ಕಟ್ಟಲಾದ ಶೌಚಾಲಯಗಳನ್ನು ಶಾಲೆಗೆ ಇನ್ನೂ ಹಸ್ತಾಂತರಿಸಿಲ್ಲ ಅಲ್ಲಿದ್ದ ನಲ್ಲಿಗಳನ್ನು ಕಿತ್ತುಹಾಕಿದ್ದಾರೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್ ಮುಪ್ಪಿನ ಮಠ ತಿಳಿಸಿದ್ದಾರೆ.