ಶಾಲಾ ಶುಲ್ಕ ಮನ್ನಾ ಮಾಡಲು ಆಗ್ರಹ

ಬಳ್ಳಾರಿ, ಸೆ.16: ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶುಲ್ಕ ಮನ್ನಾ ಮಾಡಬೇಕೆಂದು ಆಗ್ರಹಿಸಿ ಇಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ.
ಕೋವಿಡ್ ನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೆಗೆದುಕೊಂಡ ಅವೈಜ್ಞಾನಿಕ ಲಾಕ್ ಡೌನ್ ನಿಂದಾಗಿ ದೇಶದಲ್ಲಿ 16 ಕೋಟಿ ಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ ತಮ್ಮ ಮಕ್ಕಳ ಶುಲ್ಕ ಭರಿಸಿ ಎಂದು ಸರ್ಕಾರ ಹೇಳುವುದು ಸರಿಯಲ್ಲ. ಶಾಲಾ ಶುಲ್ಕ ಭರಿಸಲಾಗದೆ ಎಷ್ಟೋ ಜನ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಇನ್ನು ಆನ್ ಲೈನ್ ತರಗತಿಗಳಿಂದ ಮಕ್ಕಳಿಗೆ ಮೊಬೈಲ್ ಕೊಡಿಸಲಾಗುತ್ತಿಲ್ಲ. ಅದಕ್ಕಾಗಿ ಸಾಮಾಜಿಕ ಮತ್ತು ನೈತಿಕ ಹೊಣೆ ಹೊತ್ತು ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಶುಲ್ಕ ಮನ್ನಾ ಮಾಡಬೇಕು, ಈಗಾಗಲೇ ತಮ್ಮ ಒಡವೆ ಅಡವಿಟ್ಟು ಶಾಲಾ ಶುಲ್ಕ ಭರಿಸಿರುವ ಪೋಷಕರಿಗೆ ಶುಲ್ಕ ಹಿಂದುರಿಗಿ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಹೆಚ್.ಈರಣ್ಣ, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಭಾಷ, ಜಿಲ್ಲಾ ಸಂಯೋಜಕ ಕೆ.ಪೃಥ್ವಿರಾಜ್, ಮುಖಂಡರುಗಳಾದ ಬಿ.ವೀರೇಶ್, ಗೋವಿಂದ, ವೈ.ಬಸವರಾಜ್, ಎನ್.ರಾಮಪ್ಪ, ಮೊದಲಾದವರು ಇದ್ದರು.