ಶಾಲಾ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ


ಸಂಜೀವರಾಯನಕೋಟೆ, ಜು.13- ಪೌಷ್ಟಿಕಾಂಶ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಕೆಮ್ಮು, ನಗಡಿ,ಹೊಟ್ಟೆನೋವು,ದೃಷ್ಟಿದೋಷ,ಕಿವುಡು ಇತ್ಯಾದಿ ಕಂಡುಬರುವ ಮಕ್ಕಳು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕೆಂದು ಎಂ.ಬಿ.ಬಿ.ಎಸ್. ವೈದ್ಯರಾದ ಡಾಕ್ಟರ್ ಫ್ರುಖಾನ್ ಮಕ್ಕಳಿಗೆ ತಿಳಿಸಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ 406 ಮಕ್ಕಳಿಗೆ ಆರ್. ಬಿ.ಎಸ್. ಕೆ.ಅವರಿಂದ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಿಳಿಸಿದರು.
ಶಾಲೆಯ ಮುಖ್ಯ ಗುರುಗಳು ಡಾಕ್ಟರ್ ಬಿ.ಸಿ.ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.
ವೈದ್ಯರಾದ ಡಾಕ್ಟರ್ ಪ್ರಸನ್ನಕುಮಾರ್ RBSK, ಶಿಕ್ಷಕರಾದ ಬಸವರಾಜ,ಸಿಸ್ಟರ್ ಸುನೀತಾ, ವಿದ್ಯಾರ್ಥಿ ಪ್ರತಿನಿಧಿ ಮಹೇಶ್. ಮನೋಹರ್ ಮುಂತಾದವರು ಉಪಸ್ಥಿತರಿದ್ದರು.