ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ವಿಜಯಪುರ:ಅ.30: ಕನ್ನಡ ರಾಜ್ಯೋತ್ಸವ ಹಾಗೂ ಮಾಜಿ ಸಚಿವ, ಶಿಕ್ಷಣ ಪ್ರೇಮಿ ಬಿ.ಎಂ.ಪಾಟೀಲರ ಜನ್ಮದಿನಾಚರಣೆಯ ನಿಮಿತ್ತ ಬಬಲೇಶ್ವರ ವಿಧಾನಸಭಾಕ್ಷೇತ್ರದಾದ್ಯಂತ ಎಂ.ಬಿ.ಪಾಟೀಲ್ ಅಭಿಮಾನಿಗಳ ಪರವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸುವ ಕಾರ್ಯಕ್ರಮ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ, ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳ 5, 6 ಮತ್ತು 7ನೇ ತರಗತಿಯ ಎಲ್ಲ ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ಕೂಲ್ ಬ್ಯಾಗ್‍ಗಳನ್ನು ವಿತರಿಸಲಾಗುತ್ತಿದ್ದು, ಎಲ್ಲ ಪಾಲಕರು, ವಿದ್ಯಾರ್ಥಿಗಳು ಶಾಲಾ ಶಿಕ್ಷಕರಿಂದ ಸ್ಕೂಲ್ ಬ್ಯಾಗ್‍ಗಳನ್ನು ಪಡೆಯಬೇಕು ಎಂದು ಬಬಲೇಶ್ವರ ಶಾಸಕರ ಕಛೇರಿ ಪ್ರಕಟಣೆ ತಿಳಿಸಿದೆ.