ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.11: ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಮತ್ತು ಮಕ್ಕಳಿಗಾಗಿ ಒಂದು ದಿನದ ತರಬೇತಿ ಕಾರ್ಯಗಾರವನ್ನು  ನಡೆಸಲಾಯಿತು.
ಶಿಕ್ಷಣ ಇಲಾಖೆಯ ಸಹಕಾರದಿಂದ ಶಾಲಾ ಮಕ್ಕಳಿಗೆ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳು ಮತ್ತು ಮಂಜಾಗ್ರತಾ ಕ್ರಮಗಳ ಬಗ್ಗೆ ಆಯಾ ಶಾಲೆಗಳಲ್ಲಿ ಕಾರ್ಯಗಾರವನ್ನು ಏರ್ಪಡಿಸಿ ಪ್ರತಿಯೊಬ್ಬರು ತಮ್ಮ ಮನೆಯ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು ಸಮುದಾಯದಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳಾದ ಡಾಕ್ಟರ್ ಅಬ್ದುಲ್ಲಾ  ತಿಳಿಸಿದರು.
2025 ಕ್ಕೆ ಮಲೇರಿಯಾ ಮುಕ್ತ ತಾಲೂಕು ಮತ್ತು ಜಿಲ್ಲೆ ಮಾಡುವ ಗುರಿಯನ್ನು ಹೊಂದಿದ್ದು ಈ ನಿಟ್ಟಿನಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಈರಣ್ಣ ತಿಳಿಸಿದರು.
ತರಬೇತಿಯಲ್ಲಿ ಮಲೇರಿಯಾ ಎಂದರೇನು? ಹರಡುವ ಬಗ್ಗೆ ಲಕ್ಷಣಗಳು ಮುಂಜಾಗ್ರತಾ ಕ್ರಮಗಳು ಸೊಳ್ಳೆಯ ಜೀವನ ಚಕ್ರ ಉತ್ಪತ್ತಿ ತಾಣಗಳು ಮತ್ತು ಸಮುದಾಯದ ಮಟ್ಟದಲ್ಲಿ ಜವಾಬ್ದಾರಿಗಳು ಕುರಿತು  ಮಾಹಿತಿಯನ್ನು ನಂದಾಕಡಿ ಕೀಟಶಾಸ್ತ್ರಜ್ಞರು ಜಿಲ್ಲಾ ಪರಿವೀಕ್ಷಣಾ ಅಧಿಕಾರಿ ನೀಡಿದರು.
ತರಬೇತಿ ಕಾರ್ಯಗಾರದಲ್ಲಿ ಗುರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ, ಬಸವರಾಜಯ್ಯ ತಾಲೂಕು ಶಿಕ್ಷಣ ಸಂಯೋಜಕ ಹಾಗೂ ಶಾಲೆಯ ಮುಖ್ಯಗುರು ಹಾಗೂ ಸಹ ಶಿಕ್ಷಕರು ಇದ್ದರು.

One attachment • Scanned by Gmail