ಶಾಲಾ ವಿದ್ಯಾರ್ಥಿಗಳಿಂದ ‘ಶಾಂತಿಯ ನಡಿಗೆ’

ಕೋಲಾರ,ಅ.೨: ಮಹಾತ್ಮ ಗಾಂಧೀಜಿಯವರ ೧೫೪ನೇ ಜನ್ಮದಿನದ ಪ್ರಯುಕ್ತ ನಗರದ ಅರಳೆಪೇಟೆಯ ಸುವರ್ಣ ಸೆಂಟ್ರಲ್ ಹಿರಿಯಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊಸ ಬಸ್ ನಿಲ್ದಾಣ ಮಾರ್ಗದ ಮೂಲಕ ಅಂತರಗಂಗೆಯ ಬಳಿ ಇರುವ ಸುವರ್ಣ ಸೆಂಟ್ರಲ್ ಹೈಸ್ಕೂಲ್ ಶಾಲೆಯವರೆಗೂ ಶಾಂತಿಯ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಮಕ್ಕಳು ಶಾಂತಿಯನ್ನು ಸಾರುವ ಘೋಷ ವಾಕ್ಯಗಳ ಫಲಕಗಳನ್ನು ಹಿಡಿದು ಶಾಂತಿಯುತ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಶಾಂತಿಯ ನಡೆಗೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು.