ಶಾಲಾ ವಾಹನ ಹಾಯ್ದು ಬಾಲಕಿ ಸಾವು

ಗುರುಮಠಕಲ್,ನ.18-ಶಾಲಾ ವಾಹನದ ಚಕ್ರದ ಅಡಿಗೆ ಸಿಲುಕಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಮನಕಲುಕುವ ಘಟನೆ ಪಟ್ಟಣದ ಲಕ್ಷ್ಮೀ ನಗರದ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣದ ಲಕ್ಷ್ಮಿನಗರ ಬಡಾವಣೆಯ ನಿವಾಸಿ ವೆಂಕಟಪ್ಪ ಅವರ ಪುತ್ರಿ ಎರಡುವರೆ ವರ್ಷದ ಮನಸ್ವಿನಿ ಮೃತಪಟ್ಟ ಬಾಲಕಿ.
ಗುರುವಾರ ಸಾಯಂಕಾಲ 4.30ರ ಸುಮಾರಿಗೆ ಖಾಸಗಿ ಶಾಲೆಗೆ ಸೇರಿದ ಶಾಲಾ ವಾಹನವು ಮನೆಯ ಮುಂದೆ ಶಾಲಾ ಮಕ್ಕಳನ್ನು ಇಳಿಸಲು ಬಂದಾಗ ಈ ದುರ್ಘಟನೆ ನಡೆದಿದೆ.
ಬಾಲಕಿ ಸಾವನ್ನಪ್ಪಿದ ಸುದ್ದಿ ತಿಳಿದು ತಂದೆ-ತಾಯಿ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಗುರುಮಠಕಲ್ ಪೆÇೀಲಿಸ್ ಠಾಣೆ ಯಲ್ಲಿ ಪ್ರಕರಣೆ ದಾಖಲಾಗಿದೆ.