ಶಾಲಾ ವಾರ್ಷಿಕೋತ್ಸವ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ12 : ಪಠ್ಯದ ಜತೆಗೆ ಪಠ್ಯೇತರ ಚಟುವಟಿಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷ ಮಾದ್ಯಮ ಶಾಲೆ ತೆರೆಯುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಶ್ರೇಯಸ್ಸು ಶಾರದಾ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ ಎಂದು ನವಲಗುಂದ ಗವಿಮಠದ ಬಸವಲಿಂಗಸ್ವಾಮಿಜಿ ಶ್ಲಾಘನೆ ವ್ಯಕ್ತ ಪಡಿಸಿದರು.

ಅವರು ತಾಲೂಕಿನ ನಾಗನೂರು ಗ್ರಾಮದ ಶಾರದಾ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಶಾರದಾ ಉತ್ಸವ-24ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು ಗ್ರಾಮೀಣ ಮಕ್ಕಳು ದೂರದ ಪಟ್ಟಣ ಪ್ರದೇಶಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು, ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುವ ಮೂಲಕ ಇದ್ದಲ್ಲಿಯೇ ಉತ್ತಮ ಶಿಕ್ಷಣ ಕಲ್ಪಿಸುತ್ತಿರುವುದು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಿದೆ ಎಂದರು.

ಹಿರಿಯರಾದ ಅಣ್ಣಪ್ಪ ಬಾಗಿ ಮಾತನಾಡಿ ಕೇವಲ ದುಡ್ಡು ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆಯುವವರಿದ್ದಾರೆ ಆದರೆ ಶಾರದಾ ಶಿಕ್ಷಣ ಸಂಸ್ಥೆಯವರು ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ ಮಾದ್ಯಮ ನೀಡುತ್ತಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಬೆಳವಣೆಗೆಯಾಗಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ಮಹೇಶ ಹಿರೇಮಠ ಎಲ್ಲ ಸ್ಥರದ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಪಾಲಕರ ಸಹಕಾರದಿಂದ ಶಾಲೆಯು ಮುಂಚೂಣೆಯಲ್ಲಿ ಬೆಳೆಯುತ್ತಿದೆ, ಬರರುವ ಶೈಕ್ಷಣಿಕ ವರ್ಷದಿಂದ ಪರಿಶಿಷ್ಟಜಾತಿ/ಪಂಗಡಗಳ 8 ರಿಂದ 10ನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದರು.

ರವಿ ಹಳ್ಯಾಳ, ಎನ್,ಎಸ್, ತಾಳಿಕೋಟಿಮಠ, ಶ್ರೀನಿವಾಸ ಅಮಾತ್ಯನವರ, ಎಮ್,ಎಚ್,ಚಿಕನಾಳ, ರಮೇಶ ಕಬ್ಬೇರಹಳ್ಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಗ್ರಾಪಂ ಸದಸ್ಯರಾದ ರಜೀಯಾಬೇಗಂ ದಿವಾನಸಾಬನವರ,ಶಿವಾನಂದ ಹೊಳೆಯಣ್ಣವರ,ಇಮಾಮಸಾಬ ಲಂಬೂನವರ,ರುಕ್ಕಯ್ಯಬೇಗಂ ಕಮಲಷಾನವರ, ಶಿವಶಂಕರ ಹಿರೇಮಠ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಹಿರೇಮಠ ಸ್ವಾಗತಿಸಿದರು.ಕಾರ್ಯದರ್ಶಿ ಜಗದೀಶ ಹಿರೇಮಠ ವಂದಿಸಿದರು.