ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ರಾಯಚೂರು,ಮಾ.೦೭- ದೇವನಪಲ್ಲಿ ಗ್ರಾಮದಲ್ಲಿರುವ ಶ್ರೀ ಸಿದ್ದಗಂಗಾ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು.ರಾಯಚೂರು ನಗರ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಅವರು ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ .ಶಿವರಾಜ್ ಪಾಟೀಲ್ ಮಾತನಾಡಿ ಶ್ರೀ ಸಿದ್ದಗಂಗಾ ನ್ಯಾಷನಲ್ ಪಬ್ಲಿಕ್ ಶಾಲೆಯು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಉತ್ತಮವಾದ ಶಿಕ್ಷಣ ನೀಡುತ್ತಿದ್ದು, ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿದ್ದು, ಈ ಶಾಲೆಯು ಮುಂದೆ ಒಳ್ಳೆಯ ಶಿಕ್ಷಣ ನೀಡುತ್ತಾ, ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ, ಜೊತೆಗೆ ಈ ಶಾಲೆಗೆ ನಾನು ಎಲ್ಲಾ ರೀತಿಯ ಸಹಾಯ ಸಹಕಾರ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ, ನಗರಸಭೆ ಸದಸ್ಯರಾದ ಹರೀಶ್ ನಾಡಗೌಡ, ಲಕ್ಷ್ಮೀವೆಂಕಟೇಶ್ವರ ಏಜ್ಯುಕೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಪ್ರತಾಪ್ ರೆಡ್ಡಿ, ಉಪಾಧ್ಯಕ್ಷರಾದ ಕೆ. ಹೇಮರೆಡ್ಡಿ.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಳ್ಳಿಗಳಾದ ದೇವನಪಲ್ಲಿ, ರಾಜಲಬಂಡಾ, ಐಜಾಪೂರು ಹಾಗೂ ಮಿಟ್ಟಿ ಮಲ್ಕಾಪೂರು ಗ್ರಾಮಗಳಲ್ಲಿ ವಿವಿಧ ಸಕಾ೯ರದ ಹುದ್ದೆಗಳಿಗೆ ಆಯ್ಕೆಯಾದ ನೌಕರರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಭಾಗವಹಿಸಿ ವಿವಿಧ ಗೀತೆಗಳಿಗೆ ಕಲರ್ ಫುಲ್ ನೃತ್ಯವನ್ನು ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಈರೇಶ , ಖಜಾಂಚಿಗಳಾದ ಉರುಕುಂದಪ್ಪ , ಸದಸ್ಯರಾದ ಲೋಕಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಮ್ಮ/ಹುಸೇನಪ್ಪ , ಗುಸ್ಮಾ ಸಂಘದ ಅಧ್ಯಕ್ಷರಾದ ರವಿಕುಮಾರ್, ಊರಿನ ಹಿರಿಯ ಮುಖಂಡರಾ ಬುಗ್ಗಾರೆಡ್ಡಿ, ನವಯುಗ ಶಿಕ್ಷಣ ಸಂಸ್ಥೆಯ ವಿಘ್ನೇಶ್ವರನ್, ಗ್ರಾಮ ಪಂಚಾಯಿತಿ ಸದಸ್ಯರಾದ ಕಮಲಪ್ಪ, ವೆಂಕಟೇಶ್, ಹನುಮಂತು, ರಮೇಶ ನಾಯಕ, ತಾಯಪ್ಪ ನಾಯಕ, ಈರೇಶ, ಪರಶುರಾಮ ಗೌಡ, ಬಡೇಸಾಬ್, ಮಲ್ಲೇಶ್, ಭೀಮಪ್ಪ, ಬೋಳಬಂಡಿ, ಊರಿನ ಮುಖಂಡರಾದ ಯಂಕಣ್ಣ ಶೆಟ್ಟಿ, ಕೆ. ಈಶಪ್ಪ, ಎ. ರಾಮಪ್ಪ, ನಾಗೇಂದ್ರ ನಾಯಕ್, ಎಕ್ಬಲ್ ಸಾಬ್, ಹಾಗೂ ಮುಖ್ಯೋಪಾಧ್ಯಾಯರ, ಶಿಕ್ಷಕ ವೃಂದ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.