ಶಾಲಾ ಮಕ್ಕಳ ಶೂಗಳಲ್ಲಿ ಹಣ ಹೊಡೆಯುವ ಚಪಲ

ಗಬ್ಬೂರು,ಮಾ.೦೭- ದೇವದುರ್ಗ ತಾಲೂಕಿನಲ್ಲಿ ೨೦೨೨-೨೦೨೩ ನೇ ಸಾಲಿನಲ್ಲಿ ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿ ೧ ರಿಂದ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಶಾಲಾ ಮಕ್ಕಳ ಶೂ ಮತ್ತು ಸಾಕ್ಸ್ ಖರೀದಿಯಲ್ಲಿ ಹಣ ಹೊಡೆಯುವ ಚಪಲ ದೇವದುರ್ಗ ಶಿಕ್ಷಣ ಇಲಾಖೆಯಲ್ಲಿ ನೆಡದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಹನುಮಂತ ಸಮುದ್ರ ಅವರ ಮಾತಾಗಿದೆ.
೨೦೨೨-೨೩ ನೇ ಸಾಲಿನ ಈ ಯೋಜನೆಯ ಅನುಷ್ಠಾನ ಆ. ೨೦ ರಿಂದ ಗರಿಷ್ಠ ಸೆಪ್ಟೆಂಬರ್ ೩೦ರ ಒಳಗಾಗಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ದೇವದುರ್ಗ ತಾಲೂಕಿನಲ್ಲಿ ಜನವರಿ ತಿಂಗಳಲ್ಲಿ ಖರೀದಿ ನಡೆಸಿ ಕಳಪೆ ಮಟ್ಟದ ಶೂ ಮತ್ತು ಸಾಕ್ಸ್ ಗಳನ್ನು ಕೆಲವೊಂದು ಶಾಲೆಯಲ್ಲಿ ಹಂಚಿಕೆ ಮಾಡಿರುತ್ತಾರೆ ಇನ್ನೂ ಕೆಲ ಶಾಲೆಗಳಲ್ಲಿ ಹಂಚಿಕೆ ಮಾಡಿರುವುದಿಲ್ಲ.
ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಮಾಹಿತಿ ಕೊಡುವ ನಿಯಮ ೭(೧) ೩೦ ದಿನದ ಒಳಗೆ ಮಾಹತಿ ಕೊಡುವ ನಿಯಮವಿದೆ. ಆದರೆ ಮಾಹತಿ ಕೇಳಿದ ಮೂರು ತಿಂಗಳಿಂದ ಶಾಲೆಯ ಮುಖ್ಯ ಗುರುಗಳು ಅವೈಜ್ಞಾನಿಕ ಮಾಹಿತಿ ಕಳಿಸುತ್ತಿದ್ದಾರೆ.
ಶಾಲೆಗಳು ಮೂರು ಸಂಸ್ಥೆಗಳಿಂದ ಕೊಟೇಶನ್ ಪಡೆದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಪ್ರಕಾರವಾಗಿ ಖರೀದಿ ಪ್ರಕ್ರಿಯೆ ನಿರ್ವಹಸಿರುವುದಿಲ್ಲ.
ಪ್ರತಿ ಶಾಲೆಯೂ ಪ್ರತ್ಯೇಕವಾಗಿ ಖರೀದಿ ಮಾಡಿಲ್ಲ. ಎಲ್ಲಾ ಶಾಲೆಗಳು ಕೇಂದ್ರಿಕೃತ ಮಾದರಿಯಲ್ಲಿ ಗಣೇಶ್ ಸೆಲ್ಸ್ ಕಾರ್ಫೋಷನ್ ಬೆಸ್ತಾರವಾರಪೇಟೆ ರಾಯಚೂರಿನಲ್ಲಿ ಖರೀದಿ ಮಾಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಯಾಗಿದೋ ಇಲ್ಲವೋ ಎಂದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಏಕಪ್ರಶ್ನೆಯಾಗಿದೆ.
ಜೂ. ೨೫ರಿಂದ ಆ. ೩೦ರ ಒಳಗೆ ವಿತರಣೆಯಾಗುವುಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರು ನಿಗಾವಹಿಸಿ ಮೇಲ್ವಿಚಾರಣೆ ಮಾಡಿರುವುದಿಲ್ಲ ಎಂದು ಹನುಮಂತ ಸಮುದ್ರ, ಡಿ.ಎಚ್.ನಾಯಕ ಹಂಚಿನಾಳ ಅವರು ಗಂಭೀರವಾಗಿ ಆರೋಪಿಸಿದ್ದಾರೆ.