ಶಾಲಾ ಮಕ್ಕಳ “ಆರೋಗ್ಯ ಸಿಂಚನ” ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು: ಜು: 15: ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲದ ಸಭಾಗಂಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಶಯದಂತೆ “ಆರೋಗ್ಯ ಸಿಂಚನ” ಎಂಬ ಜಿಲ್ಲಾ ಮಟ್ಟದ ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವ ಕುರಿತು ಪ್ರೊಜೆಕ್ಟರ್ ಮೂಲಕ ಹದಿಹರೆಯದವರ ಆರೋಗ್ಯ, ಕ್ಷಯರೋಗ,ಕುಷ್ಠರೋಗ,ಋತುಚಕ್ರ ನೈರ್ಮಲ್ಯ,ಮಲೇರಿಯಾ,ಡೆಂಗಿ,ಚಿಕೂನ್ ಗುನ್ಯಾ,ಆನೆಕಾಲು ರೋಗ ಇತರ ಹಲವು ವಿಷಯಗಳ ವೀಡಿಯೋ ಬಿತ್ತರಿಸಿ ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ ಉತ್ತರ ಪಡೆದು, ಸರಿ ಉತ್ತರ ಹೇಳಿದವರಿಗೆ ಬಹುಮಾನಗಳನ್ನು ವಿತರಣೆ ಮಾಡುವ ವಿನೂತನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವುದಕ್ಕಾಗಿ ಇಂದು ಆಯ್ದ ಹಿರಿಯ ಪಿ.ಹೆಚ್.ಸಿ.ಒ, ಹೆಚ್.ಐ.ಒ, ಸಿ.ಹೆಚ್.ಒ ಗಳಿಗೆ ತರಬೇತಿಯನ್ನು ನಿಡಲಾಯಿತು, ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯತಿ ಮತ್ತು ಶಿಕ್ಷಣ ಇಲಾಖೆ ಸಹಕಾರದಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಉತ್ತಮವಾಗಿ ಮಾಹಿತಿ ನೀಡಿ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಮಾಡಿಕೊಂಡು ಅವರ ಆರೋಗ್ಯ ವೃದ್ದಿಸಿಕೊಳ್ಳಲು ಈ ಕಾರ್ಯಕ್ರಮ ಉಪಕಾರಿಯಾಗಿದೆ ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸಿ ರಾಜ್ಯಕ್ಕೆ ಮಾದರಿಯಾಗೋಣ ಎಂದು ತಿಳಿಸಿದರು,
 ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮೇಲ್ವಿಚಾರಕರಾದ ಬಂಡೆಗೌಡ,ರೀಟಾ,ಪದ್ಮಾ, ತುಕಾರಾಂ, ಮಲ್ಲಿಕಾರ್ಜುನ, ಇಸ್ಮಾಯಿಲ್, ಅನು, ಶ್ವೇತಾ, ಶೃತಿ, ದೀಪಾ, ಡಿ.ಇ.ಒ ಮಲ್ಲೇಶ್ ಇತರರು ಉಪಸ್ಥಿತರಿದ್ದರು