ಶಾಲಾ ಮಕ್ಕಳು, ವಯಸ್ಕರುಗಳು ತಂಬಾಕು ಬಳಕೆ ಮಾಡುವುದು ಸರಿಯಲ್ಲ 

ಜಗಳೂರು.ಜೂ.೧: ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗ ಬರುತ್ತದೆ ಎಂದು ಗುಟ್ಕಗಳ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಚಿತ್ರ ಬರಹಗಳನ್ನು ಮುದ್ರಿಸಿದ್ದರೂ ಸಹ ಶಾಲಾ ಮಕ್ಕಳು, ವಯಸ್ಕರುಗಳು ಬಳಕೆ ಮಾಡುತ್ತಿರುವುದಕ್ಕೆ ಜೆಎಂಎಫ್ ಮತ್ತು ಸಿವಿಲ್ ನ್ಯಾಯಾಲಯದನ್ಯಾಧೀಶರಾದ ಮಹಮದ್ ಯೂನಸ್ ಅಥಣಿ ವಿಷಾಧ ವ್ಯಕ್ತ ಪಡಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಅಭ್ಯಾಸವಿಲ್ಲದ ಕುಟುಂಬದ ಮಕ್ಕಳು ಪೋಷಕರಿಗೆ ತಿಳಿಯದಂತೆ ತಂಬಾಕು ಬಳಕೆ ಮಾಡುತ್ತಿದ್ದಾರೆ, ಅಭ್ಯಾಸವಿರುವ ಕುಟುಂಬದಲ್ಲಿ ಪೋಷಕರ ಎದುರಲ್ಲೆ ಮಕ್ಕಳು ತಂಬಾಕು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಜನಸಂಖ್ಯೆ ಇರುವ ಭಾರತ ದೇಶದಲ್ಲಿ ಹಲವಾರು ಕಾನೂನು ಜಾರಿಗೆ ತಂದರು ಸಹ ತಂಬಾಕು ಬಳಕೆ ನಿಯಂತ್ರಣ ಮಾಡುವುದು ಕಷ್ಟಕರವಾಗಿದೆ. ಪ್ರತಿಯೊಬ್ಬರು ಅರಿತು ಇದರಿಂದ ದೂರವಿರಬೇಕು ಮತ್ತು ಅಕ್ಕ ಪಕ್ಕದವರಿಗು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ತಾಲೂಕು ಆರೋಗ್ಯಧಿಕಾರಿ ಜಿ.ಓ.ನಾಗರಾಜ್ ವಿಶ್ವದ್ಯಾಂತ ಸ್ತಿçà ಪುರುಷರೆಂಬ ಬೇದ ಭಾವವಿಲ್ಲದೇ ಪ್ರತಿಯೊಬ್ಬರು ತಂಬಾಕು ಸೇವನೆ ಮಾಡಿ ಕ್ಯಾನ್ಸ್ರ್ ಎಂಬ ಮಾಹಾಮಾರಿ ರೋಗಕ್ಕೆ ತುತ್ತಾಗಿ ತಮ್ಮ ಆರೋಗ್ಯವನ್ನು ಹದಗೇಡಿಸಿಕೊಳ್ಳುತ್ತಿದ್ದಾರೆ. ಸರಕಾರ 2003 ರಲ್ಲಿ ಕೋಪ್ಟಾ ಕಾಯ್ದೆಯನ್ನು ಜಾರಿಗೆ ತಂದು ಕಾನೂನಿನ ಅಡಿಯಲ್ಲಿ ಹಲವಾರು ನಿಯಮಗಳನ್ನು ವಿಧಿಸಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದರು.ಈ ಸಂಧರ್ಭದಲ್ಲಿ ವಕೀಲರ ಸಂಘದ ತಾಲೂಕು ಅದ್ಯಕ್ಷ ಓಂಕಾರೇಶ್ವರ, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಲೋಕ್ಯಾನಾಯ್ಕ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರೇಶ್, ವಕೀಲರುಗಳಾದ ತಿಪ್ಪೇಸ್ವಾಮಿ, ಕುಂಬಾರ್ ,ಆರೋಗ್ಯ ನೀರಿಕ್ಷಕ ಕಿಫಾಯತ್, ಸೇರಿದಂತೆ ಇತರರು ಉಪಸ್ಥಿತರಿದ್ದರು.