ಶಾಲಾ ಮಕ್ಕಳು ಅಪರಿಚಿತರಿಂದ ದೂರವಿರಿ : ಪಿಎಸೈ ನಾಯಕ

ಆಲಮಟ್ಟಿ : ಆ.23: ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳ ಜೊತೆಗೆ ಅನವಶ್ಯಕ ಬೆರೆಯಬೇಡಿ. ಸಲುಗೆಯಿಂದ ಮಾತಾಡಬೇಡಿ.ಅಕಸ್ಮಾತ್ ಅನಿವಾರ್ಯತೆ ಇದ್ದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಪಿಎಸ್ ಐ ಶಿವಾನಂದ ನಾಯಕ ಶಾಲಾ ಮಕ್ಕಳಿಗೆ ಸಲಹೆ ನೀಡಿದರು.
ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಮಂಗಳವಾರ ನಿಡಗುಂದಿ ಪೆÇೀಲಿಸ್ ಠಾಣೆ ವತಿಯಿಂದ ನಡೆದ ತೆರೆದ ಮನೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಜನನಿಬಿಡ ಪ್ರದೇಶದಲ್ಲಿ ಮಕ್ಕಳು ಸೇರಿದಂತೆ ಜನರು ಹುಷಾರದಿಂದ ಇರಬೇಕು. ಸಂಚರಿಸುವಾಗ ಮೈಮನ ಕಣ್ಣಾಗಿಕಿಸಿಕೊಳ್ಳಬೇಕು. ದುಷ್ಟರು, ಖದೀಮರು ಮೈಮರಿಸಿ ಚಾಲಾಕತನದಿಂದ ತಮ್ಮ ಕೈಚಳಕ ತೋರಿಸಿ ಹಣ,ಮೌಲ್ಯದ ಒಡವೆಗಳನ್ನು ದೋಚಿ ಯಾಮಾರಿಸುತ್ತಾರೆ. ಅ ಕಾರಣ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಚರಿಸುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.ಮೈಮೇಲೆ ಬೆಲೆಬಾಳುವ ವಸ್ತುಗಳನ್ನು ಧರಿಸದೇ ತೆರಳಿದರೆ ಉತ್ತಮ. ಅಪರಿತರಿಂದ ಯಾವುದೇ ರೀತಿಯ ತಿನಿಸುಗಳನ್ನು ಸ್ವೀಕರಿಸಬಾರದು. ಮಾತಿನ ಮೋಡಿಯಿಂದ ಬಲೆಗೆ ಸಿಲುಕಿಸುತ್ತಾರೆ ಎಂದು ಮಕ್ಕಳಿಗೆ ಎಚ್ಚರಿಸಿದರು.
ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿ, ಇದೊಂದು ಆಕಸ್ಮಿಕವಾಗಿ ಜರುಗಿದ ಉಪಯುಕ್ತ ಜಾಗೃತಿ ಮೂಡಿಸುವ ಕಾರ್ಯಕ್ರಮ. ನಿಡಗುಂದಿ ಪೆÇೀಲಿಸ್ ಠಾಣೆಯವರು ಇಂಥದೊಂದು ಉತ್ತಮ ಕಾರ್ಯಕ್ರಮದ ಮೂಲಕ ಎಳೆಯ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿರುವದು ಶ್ಲಾಘನೀಯ.ಇಲ್ಲಿ ನೀಡಿರುವ ಉತ್ತಮ ಸಲಹೆ,ಸೂಚನೆಯನ್ನು ಮಕ್ಕಳು ಪಾಲಿಸಿಕೊಂಡು ಸ್ವಯಂ ಪ್ರೇರಿತರಾಗಿ ಜಾಗೃತರಾಗಬೇಕು. ಇಂದಿನ ದಿನಗಳಲ್ಲಿ ಇದು ಅಗತ್ಯ ಎಂದರು. ನಿಡಗುಂದಿ ಪೆÇೀಲಿಸ್ ಠಾಣೆ ಎಎಸೈ ಎಂ.ಬಿ.ದಡ್ಡಿ, ಶಿಕ್ಷಕ ಜಿ.ಆರ್.ಜಾಧವ, ಎಲ್.ಆರ್.ಸಿಂಧೆ,ಗುರುಮಾತೆ ಪಲ್ಲವಿ ಸಜ್ಜನ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ,ದಾನಾಬಾಯಿ ಲಮಾಣಿ, ವಾಹನ ಚಾಲಕ ಜಹೀರ,ಗೋಪಾಲ ಬಸಪ್ಪ ವಡ್ಡರ ಇತರರಿದ್ದರು.