ಶಾಲಾ ಮಕ್ಕಳಿಗೆ ಸಾರಿಗೆ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿ ಹೆಚ್ಚುವರಿಯಾಗಿ ಸರತಿ ಅಳವಡಿಕೆ

ಕಲಬುರಗಿ,ಆ.31:ಸೇಡಂ ಹಾಗೂ ಚಿತ್ತಾಪೂರ ತಾಲ್ಲೂಕುಗಳಲ್ಲಿ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯದ ಸಮಸ್ಯೆ/ ಕುಂದುಕೊರತೆಗಳ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಸಂತೋಷಕುಮಾರ ವಿ.ಹೆಚ್. ಅವರ ನೇತೃತ್ವದಲ್ಲಿ ಸೇಡಂ ಹಾಗೂ ಚಿತ್ತಾಪುರ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರನ್ನು ಆಹ್ವಾನಿಸಿ, ಸೇಡಂ ಹಾಗೂ ಚಿತ್ತಾಪುರದಲ್ಲಿ ಇತ್ತೀಚೆಗೆ ಸಭೆ ನಡೆಸಿ ವಿವಿಧ ಶಾಲಾ ಮುಖ್ಯೋಪಾಧ್ಯಾಯರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ ಹೆಚ್.ಟಿ. ಅವರು ತಿಳಿಸಿದ್ದಾರೆ.

 ಸಭೆಯಲ್ಲಿ ಸ್ವೀಕರಿಸಿದ ಅಹವಾಲುಗಳನ್ನು ಪರಿಶೀಲಿಸಿ ಹಾಗೂ ಪ್ರಮುಖ ಬೇಡಿಕೆಗಳ ಕುರಿತು ಆಗಸ್ಟ್ 18 ರಂದು ಸರ್ವೇ ನಡೆಸಿ ಈ ಕೆಳಕಂಡಂತೆ ಸಾರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. 
   ಚಿತ್ತಾಪೂರ ಪಟ್ಟಣದಿಂದ ಆದರ್ಶ ವಿದ್ಯಾಲಯಕ್ಕೆ ಬೆಳಿಗ್ಗೆ ಎರಡು ಮತ್ತು  ಸಾಯಂಕಾಲ ಎರಡು ಸರತಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಚಿತ್ತಾಪೂರ-ಐಟಿಐ ಕಾಲೇಜ್ ನಾಗಾವಿ ಕ್ಯಾಂಪಸ್‍ದಲ್ಲಿ   ಬೆಳಿಗ್ಗೆ ಎರಡು,  ಸಾಯಂಕಾಲ ಎರಡು ಸರತಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಅದೇ ರೀತಿ ಹಲಕಟ್ಟಿ ಗ್ರಾಮದಲ್ಲಿ ಓರ್ವ ಸಂಚಾರ ನಿಯಂತ್ರಕರನ್ನು ನಿಯೋಜಿಸಿ ಎಲ್ಲಾ ಸಾರಿಗೆಗಳು ನಿಲುಗಡೆ ಮಾಡಲು ಕ್ರಮ ಜರುಗಿಸಲಾಗಿದೆ.
  ಅನುಸೂಚಿ ಸಂಖ್ಯೆ 107 ಸೇಡಂ-ಚಿತ್ತಾಪೂರ ಸಾರಿಗೆಯಲ್ಲಿ ಬೆಳಿಗ್ಗೆ 8.50 ಗಂಟೆಗೆ ಟಿ.ತೊನಸನಳ್ಳಿ ಗ್ರಾಮಕ್ಕೆ ವ್ಹಾಯಾ ಮಾಡಲು ಆದೇಶಿಸಿದೆ. ಸೇಡಂ-ಆದರ್ಶ ವಿದ್ಯಾಲಯಕ್ಕೆ ಈಗಾಗಲೇ ಮೂರು ಸರತಿಗಳು ಇದ್ದು, ಬೆಳಿಗ್ಗೆ ಹಾಗೂ ಸಾಯಂಕಾಲ ತಲಾ ಒಂದು ಹೆಚ್ಚುವರಿಯಾಗಿ ಸರತಿ ಅಳವಡಿಸಲಾಗಿದೆ.   
  ಸಂಕನೂರ, ಬಾಲ್ಯಾನಾಯಕ ತಾಂಡಾ, ಬೋಜುನಾಯಕ ತಾಂಡಾ ಮತ್ತು ಕುಂಬಾರ ಹಳ್ಳಿ ಗ್ರಾಮಗಳಿಂದ ನಾಲವಾರ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.15 ಗಂಟೆಗೆ ಚಿತ್ತಾಪೂರ ಬಿಟ್ಟು 9.15 ಗಂಟೆಗೆ ನಾಲವಾರ ತಲುಪಲು ಬಸ್ ವ್ಯವಸ್ಥೆ ಮಾಡಲಾಗಿದೆ. ಚಿತ್ತಾಪೂರ-ಯಾಗಾಪೂರ ಗ್ರಾಮಕ್ಕೆ ಮಧ್ಯಾಹ್ನ 3.30 ಗಂಟೆಗೆ ಅನುಸೂಚಿ ಸಂಖ್ಯೆ 61 ರಲ್ಲಿ  ಹೆಚ್ಚುವರಿ ಸರತಿಯನ್ನು ಅಳವಡಿಸಲಾಗಿದೆ.
 ಸೇಡಂ ಘಟಕದ ಅನುಸೂಚಿ ಸಂಖ್ಯೆ 107/108 ರಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಬಿಜನಳ್ಳಿ ವ್ಹಾಯ ವ್ಯವಸ್ಥೆ, ಚಿತ್ತಾಪೂರ ಘಟಕದ ಅನುಸೂಚಿ ಸಂಖ್ಯೆ 88/89 ರಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಮಲಕೂಡ ವ್ಹಾಯಾ ವ್ಯವಸ್ಥೆ,  ಸೇಡಂ ಘಟಕದ ಅನುಸೂಚಿ ಸಂಖ್ಯೆ 72/73 ರಲ್ಲಿ ಸೇಡಂ ದಿಂದ ಸೊಮಪಲ್ಲಿ-ಆಡಕಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
 ಸೇಡಂ ಘಟಕದ ಅನುಸೂಚಿ ಸಂಖ್ಯೆ  24 ರಲ್ಲಿ ಮುನಕನಪಲ್ಲಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.  ಸೇಡಂ ಘಟಕದಿಂದ ಮುಧೋಳ ವ್ಯಾಪ್ತಿಯಲ್ಲಿ ಬರುವ ಜಿಲ್ಲೇಡಪಲ್ಲಿ, ಗಡ್ಡಾಮಿನಾ ತಾಂಡಾ, ಪಾಕಾಲ, ಮೇದಕ, ರಿಬ್ಬನಪಲ್ಲಿ ಇರನಾ ಪಲ್ಲಿ ಗ್ರಾಮಗಳಿಗೆ ಹೆಚ್ಚುವರಿ ಸುತ್ತುಗಳನ್ನು ಕಲ್ಪಿಸಲು  ಒಂದು ಹೊಸ ಅನುಸೂಚಿ ಸಂಖ್ಯೆ 32ನ್ನು ಪ್ರಾರಂಭಿಸಲಾಗಿದೆ.
  ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತರು, ಚಿತ್ತಾಪೂರ ತಹಶೀಲ್ದಾರರು, ಘಟಕಗಳ ವ್ಯವಸ್ಥಾಪಕರು ಹಾಗೂ ಚಿತ್ತಾಪುರ ಮತ್ತು ಸೇಡಂ ಸಾರಿಗೆ ನಿಯಂತ್ರಕರು ಉಪಸ್ಥಿತರಿದ್ದರು.