ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಇಲ್ಲ: ಲಕ್ಷ್ಮಿ ಮಹೇಶ್ ಆಗ್ರಹ

ಹನೂರು: ಆ.03:- ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ ಹಾಗೂ ಸಮಯ ಮೀರಿ ಬರುವ ಬಸ್ಸಿಗೆ ಹೆಚ್ಚಿನ ಜನರು ಹತ್ತುವುದರಿಂದ ವಿದ್ಯಾರ್ಥಿಗಳು ಬಾಗಿಲಲ್ಲೇ ನೇತು ಹಾಕಿಕೊಂಡು ಹೋಗು ಅಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹನೂರು ಮತ್ತು ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ಸಾರಿಗೆ ಬಸ್ ಅವ್ಯವಸ್ಥೆಯನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ(ರಿ) ರಾಜ್ಯಾಧ್ಯಕ್ಷರಾದ ಲಕ್ಷ್ಮೀಮಹೇಶ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಕುರುಬನ ಕಟ್ಟೆಯಿಂದ ಕೊಳ್ಳೇಗಾಲದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸಾರಿಗೆ ಬಸ್ ವ್ಯವಸ್ಥೆ ಇದ್ದರೂ ಸರಿಯಾದ ಸಮಯಕ್ಕೆ ಬಾರದೆ ತಡವಾಗಿ ಬರುವುದರಿಂದ ಬಸ್ಸಿನಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಪ್ರಾಣಿಕರು ಹತ್ತುತ್ತಾರೆ ಇದರಿಂದಾಗಿ ಇರುವ ಬಸ್ ನಲ್ಲಿ ಶಾಲೆಯ ಮಕ್ಕಳು ಬಸ್ಸಿನ ಡೋರ್ ನಲ್ಲಿ ನಿಂತು ಪ್ರಯಾಣ ಮಾಡುತ್ತಿದ್ದು ಬಸ್ ನಿರ್ವಾಹಕ ಹಾಗೂ ಚಾಲಕನ ಬೇಜವಾಬ್ದಾರಿ ಕಾಣಿಸುತ್ತಿದೆ.
ಆಕಸ್ಮಿಕವಾಗಿ ಇದರಿಂದ ಆಗುವ ಸಾವು ನೋವಿಗೆ ಹೊಣೆ ಯಾರು? ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬರುವ ಖಾಸಗಿ ಬಸ್ ಹಾಗೂ ಸಾರಿಗೆ ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಇಲ್ಲದೆ ಇರುವ ಕಾರಣ ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಲು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ.
ಅದರಲ್ಲೂ ಹನೂರು ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಗುಡ್ಡಗಾಡು ಪ್ರದೇಶಗಳು ದೂರದ ಪ್ರಯಾಣ ಇರುವುದರಿಂದ ಇಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇಂದಿಗೂ ಕೂಡ ಕಲ್ಪಿಸಿಲ್ಲ. ಈ ಭಾಗದಲ್ಲಿ ಗಂಟೆಗೊಂದು ಬರುವ ಬಸ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ.
ಅತಿ ಹೆಚ್ಚು ಪ್ರಯಾಣಿಕರು ಹೋಗುವಂತಹ ಸಮಯದಲ್ಲಿ ಸಾರಿಗೆ ಬಸ್ ಗಳ ಅಪಘಾತಾಕ್ಕಿಡಾಗಿರುವ ಘಟನೆಗಳು ಕೂಡ ನಡೆದಿದೆ. ಬಸ್ಸುಗಳು ಕೂಡ ನಿರ್ವಹಣೆಯ ಕೊರತೆಯಿಂದ ಕೆಟ್ಟು ಅಲ್ಲಲ್ಲಿ ನಿಂತು ಪ್ರಯಾಣಿಕರಿಗೆ ತೊಂದರೆ ಆಗಿರುವ ಘಟನೆಗಳು ಕೂಡ ನಡೆದಿದೆ.
ಇದು ಸಾರಿಗೆ ವ್ಯವಸ್ಥೆ ಅಧಿಕಾರಿಗಳ ಪೇಜ್ ಆಫ್ತಾರೆ ನಿರ್ಲಕ್ಷಕ್ಕೆ ಕಾರಣವಾಗಿದೆ ಎಂದು ಆರೋಪ ಮಾಡಿದ್ದಾರೆ.