ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.23: ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ 8 ತರಗತಿಯ  417 ಮಕ್ಕಳಿಗೆ 2022-23ನೇ ಸಾಲಿನ ಉಚಿತ ಸಮವಸ್ತ್ರಗಳನ್ನು ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ ವಿತರಿಸಿದರು.
ಶಾಲೆಯ ಮುಖ್ಯ ಗುರು ರವಿಚೇಳ್ಳಗುರ್ಕಿ ಈ ಸಂದರ್ಭದಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಕರೋನ ಮಹಾಮಾರಿ ಹಾವಳಿಯಿಂದ ತಡವಾಗಿ ಬಟ್ಟೆಗಳನ್ನು ವಿತರಿಸಲಾಗಿದೆ.ಆದ್ದರಿಂದ ಮಕ್ಕಳು ಬೇಗನೇ ಹೊಲಿಸಿಕೊಂಡು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕೆಂದು ಹೇಳಿದರು.
ಶಿಕ್ಷಕರಾದ ಮುನಾವರ ಸುಲ್ತಾನ, ಬಸವರಾಜ, ದಿಲ್ಷಾದ್ ಬೇಗಂ,ಮೋದಿನ್ ಸಾಬ್,ಚನ್ನಮ್ಮ, ಸುಮತಿ,ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ, ಗುರುಪ್ರಸಾದ್, ಊರಿನ ಅಡಿವಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.