ಶಾಲಾ ಮಕ್ಕಳಿಗೆ ಶಾಲಾ ಪುನರಾಂಭಕ್ಕೆ ಸ್ವಾಗತ ಕಾರ್ಯಕ್ರಮ

ಕೋಲಾರ,ಜ.೨: ಕೋಲಾರದ ದೊಡ್ಡಹಸಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ೫ವರ್ಷ ಪೂರೈಸಿದ “ಎಸ್’ ಗ್ರೇಡ್ ಸಂಘಗಳ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನ ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರು ಚಂದ್ರಶೇಖರ್ ಜೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಜನರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು. ಈ ನಿಟ್ಟಿನಲ್ಲಿ ತಾವು ಒಗ್ಗಟ್ಟಿನಿಂದ ನಮ್ಮ ಸಂಘವ ನ್ನು ಸಂಘಟಿಸಿದ್ಧಾಕ್ಕಾಗಿ ನಿಮ್ಮ ಸಂಘಗಳು ಎಸ್. ಗ್ರೇಡ್ ಸಂಘವಾಗಿ (ಸ್ವತಂತ್ರ ಸಂಘ) ಹೊರಹೊಮ್ಮಿದೆ ಎಂದರು. ಧರ್ಮಸ್ಥಳವು ೮೦೦ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಮಾಜದ ಏಳಿಗೆಗಾಗಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರಮಿಸುತ್ತಿದ್ದಾರೆ. ಬಡವರನ್ನು ಆರ್ಥಿಕವಾಗಿ ಸದೃಡರನ್ನಾಗಿ ಮಾಡಲು ಯೋಜನೆಯು ಪ್ರಾರಂಭವಾಗಿದ್ದು, ಕೋಲಾರ ಜಿಲ್ಲೆಯಲ್ಲಿ ೬ ವರ್ಷದಿಂದ ಜಿಲ್ಲೆಯ ಜನರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಯೋಜನೆಯನ್ನು ಜನ ಇಷ್ಟ ಪಟ್ಟು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ದೊಡ್ಡಹಸಾಳ ಗ್ರಾಮ ಎಂದರು ತಮ್ಮ ಗ್ರಾಮದಲ್ಲಿ ಯೋಜನೆಯಿಂದ ಅನೇಕ ಕಾರ್ಯಕ್ರಮಗಳು ಅನುಷ್ಠಾನಿಸಲಾಗಿದೆ. ಈ ವರ್ಷವೂ ಸಹ ಇನ್ನೂ ಅನೇಕ ಜನಪರ ಕಾರ್ಯಕ್ರಮವನ್ನು ಅನುಷ್ಠಾನಿಸಲು ಶ್ರಮಿಸುತ್ತೇವೆ. ಇದಕ್ಕೆ ಗ್ರಾಮಸ್ಥರ ಸಹಕಾರ ಬೇಕೆಂದು ಕರೆ ನೀಡಿದರು. ಈ ಸಂಧರ್ಭದಲ್ಲಿ ಶಾಲೆಯು ಹೊಸ ವರ್ಷದ ಪ್ರಥಮ ದಿನ ಶಾಲಾ ಪುನಾರಂಭವಾಗಿದ್ದು, ಶಾಲೆಯ ತರಗತಿಗಳು ಮುಂದುವರೆಯಲು ಎಂದು ಆರೈಸಿ ಶಾಲಾ ಮಕ್ಕಳಿಗೆ ತರಗತಿಗೆ ಸ್ವಾಗತಿಸಿ, ಕರೋನ ಮುಕ್ತ ಸಜಾಜ ಕಟ್ಟೋಣ ಎಂದು ಕೈ ಜೋಡಿಸಿ ಎಂದು ಕೆರೆ ನೀಡಿದರು.
ಮುಖ್ಯ ಅತಿಥಿಗಳಾದ ಸಿ.ಆರ್. ಅಶೋಕ್ ಶಿಕ್ಷಣಾಧಿಕಾರಿಗಳು ಕೋಲಾರ. ಧರ್ಮಸ್ಥಳ ಯೋಜನೆಯು ರಾಜ್ಯದಲ್ಲಿ ಶಿಕ್ಷಣಕ್ಕೆ ನೀಡಿರುವ ಕೊಡುಗೆ ಅಪಾರ, ಇದನ್ನು ಎಲ್ಲಾ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಿ ಎಂದು ತಿಳುವಳಿಕೆ ನೀಡಿದರು.
ಸಿ.ಎಂ. ಮುನಿರಾಜು ಪ್ರಬಂಧಕರು ಕಾರ್ನಾಟಕ ಗ್ರಾಮೀಣ ಬ್ಯಾಂಕ್ ಕೋಲಾರ. ಸಿ.ಆರ್ ಗೌಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೊಡ್ಡಹಸಾಳ, (ಗ್ರಾಂ, ಪಂ) ಇವರು “ಎಸ್’ ಗ್ರೇಡ್ ಸಂಘದ ಸದಸ್ಯರಿಗೆ ಶುಭ ಆರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಯುತ ಸಿ.ಎಂ.ಆರ್ ಶ್ರೀನಾಥ ಗೌಡ ದೊಡ್ಡಹಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೦೦ನೇ ಸಂಪಿಗೆ ಪ್ರಗತಿ ಬಂಧು ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿ ಈ ಸಂಘಕ್ಕೆ ದಾಖಲಾತಿ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಸಂಸ್ಥೆಯ ಜನಪರ ಕಾರ್ಯಕ್ರಮವು ಇಡೀ ದೇಶಕ್ಕೆ ಮಾದರಿ ಆಗಿದೆ. ಈ ಯೋಜನೆಯನ್ನು ನಡೆಸುತ್ತಿರುವ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನಮ್ಮ ಕರ್ನಾಟಕದಲ್ಲಿ ಇರುವುದು ನಮ್ಮೆಲ್ಲರ ಭಾಗ್ಯ ಶ್ರೀ.ಕ್ಷೇತ್ರ ಧರ್ಮಸ್ಥಳಕ್ಕೆ ನಾನು ಭೇಟಿ ನೀಡಿದ ಸಂದರ್ಭ ಪೂಜ್ಯರು ನನ್ನನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡು ಆಶೀರ್ವಾದಿಸಿ ನಮ್ಮ ಜಿಲ್ಲೆಯ ಕೃಷಿ ಮತ್ತು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಮಾತನಾಡಿ ಜಿಲ್ಲೆಯ ರೈತರು ನಮ್ಮ ರಾಜ್ಯಕ್ಕೆ ಮಾದರಿಆಗಿದ್ದಾರೆ.
ಇಲ್ಲಿ ಬೆಳೆಯುವ ಟೆಮೆಟೋ, ಹೈನುಗಾರಿಕೆ, ರೇಷ್ಮೆ, ಕಾರ್ಯಕ್ರಮದಲ್ಲಿ ವಾತ್ಸಲ್ಯ ಸಂಘದ ದಿಂಬ ಗ್ರಾಮದ ೭ಜನ ವೃದ್ಧರಿಗೆ ಒಕ್ಕೂಟದ ಕಾರ್ಯದರ್ಶಿಗಳಾದ ಪಾರ್ವತಮ್ಮ ನಾಗರಾಜ್ ಸ್ವೆಟರ್ ವಿತರಿಸಿದರು.ಈ ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕರ ಹರೀಶ್ ಕುಮಾರ್ ನಿರೂಪಿಸಿ ರಾಷ್ಟ್ರ ಕ್ರೀಡಾಪಟು ಗ್ರಾಮದ ವೆಂಕಟೇಶ್ ಸ್ವಾಗತಿಸಿ ಚಂದ್ರಶೇಖರ್ ಶಿಕ್ಷಕರು ಅಭಿನಂದಿಸಿದರು.
ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸೇವಾಪ್ರತಿನಿಧಿಗಳು ಆದ ಅಮರಾವತಿ, ಪುಷ್ಪ, ಒಕ್ಕೂಟದ ಅಧ್ಯಕ್ಷರು ಜಯವೇಲು ಉಪಾಧ್ಯಕ್ಷರಾದ ಪದ್ಮಮ್ಮ ಕಾರ್ಯದರ್ಶಿಗಳಾದ ಮಂಜುಳ, ಪಾರ್ವತಮ್ಮ ಗ್ರಾಮದ ಮುಖಂಡರು ಹಾಜರಿದ್ದರು.