ಶಾಲಾ ಮಕ್ಕಳಿಗೆ ಮಾಸ್ಕ್ ವಿತರಣೆ

ಹಗರಿಬೊಮ್ಮನಹಳ್ಳಿ .ಜ.೧೨ ತಾಲೂಕಿನ ಸರ್ಕಾರಿ ಪ್ರೌಢಶಾಲೆ ವಲ್ಲಭಾಪುರ ದಲ್ಲಿ ಮಾಸ್ಕ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ದೊಡ್ಡಬಸಪ್ಪ ಬೆಳಗುಂದಿ ಇವರು ಮಕ್ಕಳಿಗೆ ಸುಮಾರು 230 ಮಾಸ್ಕ್ ಗಳನ್ನು ಉಚಿತವಾಗಿ ನೀಡಿದರು. ಶಾಲೆಯ ಆಂಗ್ಲ ಪಂಡಿತರಾದ ಕುಮಾರ್ ನಾಯಕ್ ರವರು ಮಾತನಾಡಿ ಮಾಸ್ಕ ಬಳಕೆ ಮತ್ತು ದಾನವಾಗಿ ನೀಡಿರುವ ದೊಡ್ಡಬಸಪ್ಪ ಇವರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಾಗೂ ಪ್ರಭಾರಿ ಮುಖ್ಯಗುರುಗಳಾದ ಶ್ರೀಮತಿ ಶಶಿರೇಖಾ ಮಾತನಾಡಿ ಸಾಂಕ್ರಮಿಕ ರೋಗಗಳು ಹರಡುವಿಕೆ ಮತ್ತು covid-19 ರೋಗಗಳ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾತನಾಡಿದರು , ಶ ಶಾಹಿದ್ ಬಾಷಾ ವಿಜ್ಞಾನ ಶಿಕ್ಷಕರು ಮಾತನಾಡಿ ಗಾಳಿಯ ಮೂಲಕ ಮತ್ತು ನೀರಿನ ಮೂಲಕ ಹರಡುವ ರೋಗಗಳು ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಕೊಟ್ರೇಶ್ ರವರು ಹಾಜರಿದ್ದರು.