
ಅಥಣಿ : ಸೆ.9:ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ಪೆÇಲೀಸ್ ಠಾಣೆ ಕಾರ್ಯವೈಖರಿ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ‘ತೆರೆದ ಮನೆ’ ಕಾರ್ಯಕ್ರಮದಡಿ ಶಾಲಾ ಮಕ್ಕಳನ್ನು ಠಾಣೆಗೆ ಕರೆಸಿಕೊಂಡು ಪೆÇಲೀಸ್ ಇಲಾಖೆಯ ಕರ್ತವ್ಯಗಳು, ಇಲಾಖೆಯ ವ್ಯವಸ್ಥೆ, ಠಾಣೆಯ ಮಾಹಿತಿ, ಅಪರಾಧಗಳ ಹುಡುಕಾಟ, ಬಂದೂಕು, ವಾಕಿಟಾಕಿ, ಬಂದೀಖಾನೆ ಹಾಗೂ
ಸಿ ಸಿ ಕ್ಯಾಮೆರಾಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಥಣಿ ಠಾಣೆಯ ಹೆಚ್ಚುವರಿ ಪಿಎಸ್ ಐ ಚಂದ್ರಶೇಖರ ಸಾಗನೂರ ಸವಿವರವಾಗಿ ಮಾಹಿತಿ ನೀಡಿದರು,
ಈ ಸಂದರ್ಭದಲ್ಲಿ ಹೆಚ್ಚುವರಿ ಪಿಎಸ್ ಐ ಚಂದ್ರಶೇಖರ ಸಾಗನೂರ ಮಾತನಾಡಿ ಪೆÇಲೀಸ್ ಇಲಾಖೆ ಜನಸ್ನೇಹಿ, ಮಕ್ಕಳ ಸ್ನೇಹಿಯಾಗಲು ತೆರೆದ ಮನೆ ಕಾರ್ಯಕ್ರಮ ಜಾರಿ ಮಾಡಲಾಗಿದೆ.
ಶಾಲಾ ಮಕ್ಕಳು ಮುಕ್ತವಾಗಿ ಈ ತೆರೆದ ಮನೆಗೆ ಬರುತ್ತಾರೆ. ತೆರೆದ ಮನೆ ಅಂದರೆ ಪೆÇಲೀಸ್ ಠಾಣೆ. ಪೆÇಲೀಸರು ಎಂದರೆ ಭಯ, ಕಾನೂನು, ಇವೆಲ್ಲ ಸಾಮಾನ್ಯವಾಗಿರುತ್ತೆ. ಆದರೆ ಶಾಲಾ ಮಕ್ಕಳಿಗೂ ಪೆÇಲೀಸ್ ಠಾಣೆಯಲ್ಲಿ ದೈನಂದಿನ ಕಾರ್ಯ ಏನೇನು ನಡೆಯುತ್ತೆ. ಪೆÇಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ. ಬಾಂಧವ್ಯ ವೃದ್ಧಿ, ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷಿತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳು ಸೇರಿದಂತೆ ಶಾಲಾ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.
ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೆÇಲೀಸ್ ಇಲಾಖೆ ಚಿಂತನೆ. ಎಂದರು.
ಅಥಣಿ ಪೆÇಲೀಸ್ ಠಾಣೆಯಲ್ಲಿ ಇಲಾಖೆಯಿಂದ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮದಲ್ಲಿ ನಡೆಯುತ್ತಿರುವುದು ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ
ಈ ವೇಳೆ ಸಿಬ್ಬಂದಿ ಪ್ರಕಾಶ ಪಾಟೀಲ, ಅಶ್ವಿನಿ ಭಡಕಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು,