ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಜಗಳೂರು.ಜೂ.೮; ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶಾಸಕ  ಎಸ್. ವಿ  ರಾಮಚಂದ್ರ ಅಧ್ಯಕ್ಷತೆಯಲ್ಲಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ಮತ್ತು ಎಸ್.ಎಸ್ ಎಲ್.ಸಿ.ಮಕ್ಕಳಿಗೆ ಹೊಸ ಪುಸ್ತಕ ಬರುವವರೆಗೆ ಹಳೇ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ನಂತರ ಮಾತನಾಡಿದ ಶಾಸಕ ಕಳೆದ ಲಾಕ್ ಡೌನ್ ಅವಧಿಯಿಂದ ಇಲ್ಲಿಯವರೆಗೆ ತಾಲೂಕು ಶಿಕ್ಷಣ ಇಲಾಖೆ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಇಲಾಖೆ  ಅನೇಕ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ. 2020 -21 ಹಾಗೂ 2021 -22 ನೇ ಸಾಲಿನಲ್ಲಿ ಹತ್ತನೇ ತರಗತಿಯ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ವಿವಿಧ ಮೂಲಗಳಿಂದ ಆನ್ಲೈನ್ ದೂರವಾಣಿ ಕರೆ ಹಾಗೂ ಗೃಹಪಾಠ ಇತ್ಯಾದಿ ಮಾಡುವುದರ ಮುಖಾಂತರ ನಿರಂತರ ಸಂಪರ್ಕದಲ್ಲಿ ಇಟ್ಟುಕೊಂಡು ಕಲಿಕೆ ಕಲಿಕೆ ಮುಂದರಿಸಲಾಗಿದೆ. ಮೇ -10-10ನೇ ತರಗತಿಯ 2020-21 ಸಾಲಿನ 2151 ಮಕ್ಕಳಿಗೆ ಜಿಲ್ಲಾ ಅಂತದ ಮೊದಲ ಗೃಹ ಆಧಾರಿತ ಪರೀಕ್ಷೆ ನಡೆಸಿ ಶೇಕಡಾ 86 ಫಲಿತಾಂಶ ಪಡೆಯಲಾಗಿದೆ ಆಗುವುದರಿಂದ ಎರಡನೇ ಹಂತದ ಗೃಹಾಧಾರಿತ ಪರೀಕ್ಷೆಗೆ ಕ್ರಮಕೈಗೊಳ್ಳ
ಲಾಗಿದೆ.ಮತ್ತು ಜೂನ್ ಹತ್ತರಿಂದ ಎಲ್ಲಾ ತರಗತಿಯ 28000 769 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯೋಜನೆ ರೂಪಿಸಿಕೊಂಡು ತಾಲೂಕಿನ ಶಿಕ್ಷಕರ ಹಾಗೂ ಶಿಕ್ಷಕರ ಸಂಘಗಳ ಸಹಕಾರ
ದಿಂದ ಸೇತುಬಂಧ ಕಾರ್ಯಕ್ರಮಕ್ಕೆ ಕ್ರಿಯಾ
ಯೋಜನೆ ಕ್ರಮವಹಿಸಲಾಗಿದೆ. 2020 – 21ನೇ ಸಾಲಿನ 10 ನೇ ತರಗತಿ ಪರೀಕ್ಷೆಗೆ ಒಂದು ಕೊಠಡಿಗೆ 12 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಮಾಡಿಕೊಂಡು ಪರೀಕ್ಷಾ ಕೇಂದ್ರ ಸಾಮರ್ಥ್ಯ 100 ಮಕ್ಕಳಿಗಿಂತ ಕಡಿಮೆ ಇಲ್ಲದಂತೆ ಕೇಂದ್ರಗಳ ರಚನೆಗೆ ಕ್ರಿಯಾಯೋಜನೆಗೆ ರೂಪಿಸಲು ಕ್ರಮ
ವಹಿಸಲಾಗಿದೆ.ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 32 ಸಿಬ್ಬಂದಿ ಕೋವಿಡ್-19  ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕಿನಲ್ಲಿ ಸೋಂಕಿಗೆ ತುತ್ತಾಗಿ ಮೃತಪಟ್ಟ
ಶಿಕ್ಷಕರು ಇಲ್ಲಿವರೆಗೆ 8 ಜನ ತಾಲೂಕಿನಲ್ಲಿ ಇದ್ದಾರೆ
.ಕೋವಿಡ್-19 ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕರ ಸಂಖ್ಯೆ – 7 ಎಲ್ಲರೂ ಆರೋಗ್ಯವಾಗಿ ಇದ್ದಾರೆ.ಅವಶ್ಯಕತೆ ಇರುವ ಶಾಲೆಗಳಿಗೆ ಶಾಲಾ ದುರಸ್ತಿ ಶಾಲಾಕಟ್ಟಡ ಸಾಧನ ಸಾಮಗ್ರಿಗಳ ಸರಬರಾಜು ಶೌಚಾಲಯಗಳ ನಿರ್ಮಾಣ ಇತ್ಯಾದಿಗಳ ನಿರ್ವಹಣೆಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಗಳೂರು ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ  ಪರೀಕ್ಷಾ ಕೇಂದ್ರಗಳ ಸಂಖ್ಯೆ-14. ಹತ್ತರಿಂದ ಹನ್ನೆರಡು ವಿದ್ಯಾರ್ಥಿಗಳಿಗೆ ಒಂದು ಕೊಠಡಿಗಳಂತೆ  ಪರೀಕ್ಷಾ ಕೇಂದ್ರ ರಚನೆ ಮಾಡಲಾಗಿ ಕೋವಿಡ್
-19 ನಿಯಮಾನುಸಾರ ಪರೀಕ್ಷೆ ನಡೆಸಲಾಗುತ್ತದೆ
.ಪರೀಕ್ಷೆ ನಡೆಸುವ ಸಿಬ್ಬಂದಿಯವರಿಗೆ ಲಸಿಕೆ ಕಡ್ಡಾಯವಾಗಿರುತ್ತದೆ ಒಂದು ದಿನ ಭಾಷಾ
ವಿಷಯಗಳು ಮತ್ತೊಂದು ದಿನ ಕೋರ್ ವಿಷಯಗಳ ಪರೀಕ್ಷೆ ಇರುತ್ತದೆ ಎರಡು ಪರೀಕ್ಷೆ
ಗಳ ದಿನಗಳ ಅಂತರ ಮೂರು ದಿನ ಇರುತ್ತದೆ. ಪರೀಕ್ಷೆಯು ಜುಲೈ ಮೂರನೇ ವಾರದಲ್ಲಿ ನಡೆಯಲಾಗುತ್ತದೆ.ಮಕ್ಕಳನ್ನು ಸಂಪರ್ಕಿಸುವು
ದರ ಮೂಲಕ ಎಲ್ಲಾ ಪೋಷಕರನ್ನು ಕೂಡ ಮೊಬೈಲ್ ಹಾಗೂ ಗೂಗಲ್ ಮೀಟ್ ಮೂಲಕ ಸಂಪರ್ಕಿಸಿ ತಮ್ಮ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಲಾಗಿದೆ.ಜೂನ್ ಹತ್ತರಿಂದ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಎಲ್ಲಾ ಮಕ್ಕಳಿಗೆ ಮೊಬೈಲ್ ಮಾಧ್ಯಮದ ಮೂಲಕ ಪರ್ಯಾಯ ಶೈಕ್ಷಣಿಕ ಕಾರ್ಯಕ್ರಮಗಳನ್ನು. ನಮ್ಮ ಜಗಳೂರು ತಾಲೂಕಿನ ಶಿಕ್ಷಣ ಇಲಾಖೆ
ಯಲ್ಲಿ ಈ ಕಾರ್ಯ ಕ್ರಮಗಳನ್ನು  ಹಮ್ಮಿಕೊಳ್ಳ
ಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು

ಈ ಸಂದರ್ಭದಲ್ಲಿ  ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾ
ಧಿಕಾರಿ ಮಂಜಪ್ಪ ದಿದ್ದಿಗೆ.ಬಿ.ಆರ್.ಸಿ ಗಿರೀಶ್.
ಡಿ.ಸಿ.ಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ವೇಣು ಗೋಪಾಲ್ ರೆಡ್ಡಿ ಇತರರಿದ್ದರು.