ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಅರಕೇರಾ.ಜೂ.೦೯-ಕೋವಿಡ್-೧೯ ವೈರಸ್ ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು ೬,೭.೮.೯,೧೦ ನೇ ತರಗತಿಯವರಿಗೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿರುವ ಹಿನ್ನೆಯಲ್ಲಿ ಅರಕೇರಾ ಗ್ರಾಮದಲ್ಲಿನ ಆದರ್ಶ ವಿದ್ಯಾಲಯದಲ್ಲಿ ಅಭ್ಯಾಸಮಾಡುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಿಸಿ ಊಟದ ಆಹಾರ ಧಾನ್ಯಗಳನ್ನು ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕ ಅಕ್ಷರದಾಸೋಹ ಸಹಾಯಕ ನಿರ್ದೇಶಕರ ಆದೇಶದ ಮೇರೆಗೆ ಮಕ್ಕಳಿಗೆ ಇಂದು ಅರಕೇರಾ ಆದರ್ಶವಿದ್ಯಾಲಯ ಶಾಲಾಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಇಂದಿರಾ ಮಕ್ಕಳಿಗೆ ಆಹಾರ ಧ್ಯಾನಗಳನ್ನು ವಿತರಣೆಮಾಡಿದರು.
ಪಾಲಕರ ಜೊತೆಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಕೊಂಡು ಸಮಾಜಿಕ ಅಂತರಕಾಯ್ದುಕೊಂಡು ಆಹಾರಧಾನ್ಯಗಳನ್ನು ಸಮಾಜಿಕ ಅಂತರಕಾಯ್ದುಕೊಂಡು ನವೆಂಬರ ಮತ್ತು ಡಿಸೆಂಬರ ೨೦೨೦ ನೇ ,೪೯ ದಿವಸಗಳ ಬಿಸಿಊಟದ ಆಹಾರ ಧಾನ್ಯಗಳ ಹಂಚಿಕೆಯಾದ ಅಕ್ಕಿ,ಬೆಳೆ,ಗೋಧಿ,ಎಣ್ಣೆ ಆಹಾರ ಧ್ಯಾನ್ಯಗಳನ್ನು ಪಡೆದುಕೊಂಡರು. ಸಂದರ್ಬದಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಬಂದೋಲಿಸಾಬ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸೂಗೂರೇಶ್ವರ ಎಸ್ ಗುಡಿ, ಸದಸ್ಯರುಗಳಾದ, ಬಸವಲಿಂಗಯ್ಯಸ್ವಾಮಿ, ಪಾರೊಖು ಸಹ ಶಿಕ್ಷಕರಾದ ಭದ್ರಣ್ಣಮಸರಕಲ್, ಪಾಲಕರು ಆಡುಗೆ ಸಿಬ್ಬಂದಿವರ್ಗದವರು ಮುಂತಾದವರು ಉಪಸ್ಥಿತರಿದ್ದರು.