ಶಾಲಾ ಮಕ್ಕಳಿಂದ ವಿವಿಧ ಕಾಮಗಾರಿಗೆ ಚಾಲನೆ


ದಾವಣಗೆರೆ, ಜ.14: ಮಹಾನಗರ ಪಾಲಿಕೆಯ 38ನೇ ವಾರ್ಡ್ನ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ನೇತೃತ್ವದಲ್ಲಿ ನಗರದ ಚಿಲಕೂರಿ ನರಸಯ್ಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಏರ್ಪಡಿಸಿದ್ದ ವಿವಿಧ ಕಾಮಗಾರಿಗಳನ್ನು ಶಾಲಾ ಮಕ್ಕಳು ಉದ್ಘಾಟಿಸಿದರು.
ಎಂಸಿಸಿ ಬಿ ಬ್ಲಾಕ್‌ನ ಮೂರನೇ ಮೇನ್ ಆರನೇ ಕ್ರಾಸ್‌ನ ಸಿಸಿ ರಸ್ತೆ, ಕಡ್ಲಿ ನಿಂಗಮ್ಮ ನರ್ಸಿಂಗ್ ಹೋಮ್ ಬಳಿಯ ಎರಡನೇ ಮೇನ್‌ನ ಬಾಕ್ಸ್ ಚರಂಡಿ ಹಾಗೂ ಫೇರ‍್ಸ್ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಾಲಾ ಮಕ್ಕಳೇ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಮಕ್ಕಳಿಗೆ 200 ಜೊತೆ ಶೂಗಳನ್ನು ವಿತರಿಸಿದರು. ಈ ವೇಳೆ ಹಿರಿಯ ನಾಗರಿಕರಾದ ಗುರುಮೂರ್ತಿ, ಬಿ.ಹೆಚ್. ಪರಶುರಾಮಪ್ಪ, ಎಸ್.ಟಿ. ಕುಸುಮ ಶ್ರೇಷ್ಠಿ, ಆಂದನೂರು ಮುಪ್ಪಣ್ಣ, ಕೆ. ಜಾವೀದ್, ಮೇಕ ಮುರುಳಿಕೃಷ್ಣ, ವೆಂಕಟ್ ರೆಡ್ಡಿ, ಧರ್ಮಾಚಾರ್, ಆಲೂರು ಜ್ಯೋರ್ತಿಲಿಂಗ, ಐನಳ್ಳಿ ಮಹಾಬಲೇಶ್ವರ, ದೊಗ್ಗಳ್ಳಿ ಶಿವಕುಮಾರ್, ಬೆಳ್ಳೊಡಿ ಉಮೇಶ್, ಆರ್.ಜಿ. ಧನೇಶ್, ಜಿ.ಎಸ್. ಸತೀಶ್, ಪ್ರಮೋದ್ ಕೆ.ವಿ. ಭರತ್ ಮೈಲಾರ್, ಜಿ.ಎಸ್. ಮನು, ಶ್ರೀಕಂಠರಾಜು, ಎಂ.ಟಿ. ಶ್ರೀಕಾಂತ್, ಕೆ.ಎಂ. ಬಸವರಾಜ್, ನಿಖಿಲ್ ಮಂತ್ರಿ, ನೀಲಂಕAಠಪ್ಪ ಸಿಂಧಗಿ, ಕಾಶಿ ವಿಶ್ವನಾಥ್, ಕೆ.ಬಿ. ಮಂಜುನಾಥ, ಶಾಲೆಯ ಮುಖ್ಯ ಶಿಕ್ಷಕ ರಾಜಪ್ಪ ರೆಡ್ಡಿ, ಸಿ.ಪಿ. ಪೂರ್ವಾಚಾರ್, ಶಂಕರ್ ಎಂ., ಟಿ.ವಿ. ಮಂಜಪ್ಪ, ಕೆ.ಜೆ. ವಿಜಯ್, ಯು.ಕೆ. ರಮೇಶ್ ಮತ್ತಿತರರು ಹಾಜರಿದ್ದರು.