ಶಾಲಾ ಮಕ್ಕಳಿಂದ ಗ್ರಾಮದ ಆಡಳಿತ ಕಛೇರಿಗಳಿಗೆ ಭೇಟಿ ಮಾಹಿತಿ ಸಂಗ್ರಹ

ಶಹಾಪುರ ನ 21: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲಗಳು ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇವುಗಳನ್ನು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಜೋತೆಗೆ ಮೈಗೂಡಿಸಿಕೊಳ್ಳಲು ಅವಕಾಶ ನೀಡಿದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ ಸಂಭ್ರಮ ಶನಿವಾರ ಎಬ ಕಾರ್ಯಕ್ರಮ ರೂಪಿಸಿದ್ದು, ಇದರ ಪ್ರಯುಕ್ತವಾಗಿ ರಸ್ತಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮದಿಂದ, ಖುಷಿಯಿಂದ ಗ್ರಾಮದ ಹಲವಾರು ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಕಛೇರಿಗಳಾದ ಆರೋಗ್ಯ ಉಪಕೇಂದ್ರ ರಸ್ತಾಪುರ ಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆರೋಗ್ಯ ಉಪಕೇಂದ್ರದ ಆರೋಗ್ಯ ನೀರಿಕ್ಷಕರಾದ ಆನಂದಗೌಡ ಮಾಲಿ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಆರೋಗ್ಯ ಉಪಕೇಂದ್ರದಲ್ಲಿ ದೋರೆಯುವ ವಿವಿಧ ಆರೋಗ್ಯ ಸೇವೆಗಳ ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಹಾಗೂ ತಮ್ಮ ಕುಟುಂಬಸ್ಥರಿಗೆ ಆರೋಗ್ಯ ಸೇವೆಗಳ ಬಗ್ಗೆ ತಿಳಿ ಹೆಳಿ ಸೇವೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಮುಂದುವರಿದು ವಿದ್ಯಾರ್ಥಿಗಳು ಅಂಚೆ ಕಛೇರಿಗೆ ಭೆಟಿ ನಿಡಿದಾಗ ಅಲ್ಲಿನ ಅಂಚೆ ಕಛೇರಿಯ ಪೆÇಸ್ಟಮ್ಯಾನ ಸಿದ್ದಯ್ಯ ಪುರಾಣಿಕ ಅಂಚೆ ಕಛೇರಿಯಲ್ಲಿ ಶಾಲಾ ಮಕ್ಕಳಿಗೆ ಚಾಲ್ತಿ ಖಾತೆ ಹಾಗೂ ಸುಕನ್ಯ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮುಂದುವರಿದು ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರು, ಅಂಗನವಾಡಿ ಕೇಂದ್ರ 1, ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಮಾರುತಿರಾವ ಕುಲಕರ್ಣಿ, ಕಿರಿಯ ಆರೋಗ್ಯ ಸಹಾಯಕರಾದ ಅನ್ಸಾರಿ, ಅತಿಥಿ ಶಿಕ್ಷಕರಾದ ಭಾಗಪ್ಪ ಅಯ್ಯಪ್ಪನವರ ರಸ್ತಾಪುರ , ಮಲ್ಲಪ್ಪ ರಸ್ತಾಪುರ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.