ಶಾಲಾ ಮಕ್ಕಳಲ್ಲಿ ಕೃಷಿ ಮತ್ತು ಆರೋಗ್ಯದ ಮಾಹಿತಿ

ಕಲಬುರಗಿ:ಫೆ.5:ಶಾಲಾ ವಿದ್ಯಾರ್ಥಿಗಳಲ್ಲಿ ಕೃಷಿ ಮತ್ತು ಆರೋಗ್ಯದ ಮಾಹಿತಿ ನಿರಂತರವಾಗಿರಬೇಕು. ಬದಲಾಗುತ್ತಿರುವ ಹವಾಮಾನ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಹಣ್ಣು, ತರಕಾರಿ, ಸಿರಧಾನ್ಯ, ಪೋಷಕಾಂಶಯುಕ್ತ ಆಹಾರವು ಪ್ರಮುಕ ಪಾತ್ರ ವಹಿಸುತ್ತದೆ ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ವಿಜ್ಞಾನಿಯವರಾದ ಡಾ. ಜಹೀರ್ ಅಹೆಮದ್ (ಸಸ್ಯರೋಗಶಾಸ್ತ್ರ) ರವರು ವಿವರವಾಗಿ ತಿಳಿಸಿದರು.
ಡಿಜಿ ಕಿಡ್ಸ್ ಶಾಲೆಯು ಪುಟ್ಟ ಮಕ್ಕಳ ಚಟುವಟಿಕಾ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ತನ್ನ 4ನೇ ವಾರ್ಷಿಕೋತ್ಸವನ್ನು ಆಚರಿಸುತ್ತಿರುವುದು ಸಂತೋಷದ ವಿಷಯ, ಮಕ್ಕಳ ಜೊತೆಗೆ ಪೋಷಕರಿಗೂ ವಿವಿಧ ಕಲಾ ಸ್ಪರ್ದೆ, ಕ್ರೀಡಾ ಸ್ಪರ್ದೆ, ಚಟುವಟಿಕಾ ಸ್ಪರ್ದೆ ಆಯೋಜಿಸುತ್ತಿರುವುದು ಬೆಳೆಯುತ್ತಿರುವ ಈ ಪ್ರಪಂಚದಲ್ಲಿ ಮಕ್ಕಳು ಉತ್ತಮವಾಗಿ ಹೊಂದಿಕೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ ಮೊಬೈಲ್ ಆಟೋಟಾಗಳನ್ನು ಕಡಿಮೆ ಮಾಡಿ ಕೈ ಬರಹ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಲು ಸಲಹೆ ನೀಡಿದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರಗಿಯ ಸಹ ಪ್ರಾಧ್ಯಾಪಕರಾದ ಡಾ. ದಯಾಲಕ್ಷ್ಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಉತ್ತಮ ಆರೋಗ್ಯಕ್ಕೆ ಪೋಷಕರು ಸರಕಾರ ಏರ್ಪಡಿಸುವ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಹಸಿರು ಸೊಪ್ಪು, ವಿಟಾಯುಕ್ತ ಆಹಾರ, ಶುದ್ದ ನೀರು, ಸ್ವಚ್ಛತೆಗೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಜೊತೆಗೆ ಕಲ್ಯಾಣ ಕರ್ನಾಟಕದ ಭಾಗದಲ್ಲಿರುವ ಕಾಣಿಸಿಕೊಂಡಿರುವ ಅಪೌಷ್ಟಿಕತೆಯನ್ನು ನಿವಾರಣೆ ಮಾಡಲು ವೈದ್ಯರ ಮತ್ತು ತಜ್ಞರ ಸಲಹೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಡಿಜಿ ಕಿಡ್ಸ್ ಶಾಲಾ ಮುಖ್ಯಸ್ಥರಾದ ಡಾ. ಮಂಜು ಷಾ ರವರು ವಾರ್ಷಿಕ ವರದಿಯನ್ನು ಹಾಗೂ ಚಟುವಟಿಕೆಯನ್ನು ವಿವರಿಸಿದರು. ಆಡಳಿತಾಧಿಕಾರಿ ಹಾಗೂ ಪ್ರಗತಿಪರ ರೈತರಾದ ಡಾ. ಪ್ರಸಾದ ಮಠಪತಿ ರವರು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕು. ಶ್ರೇಯಾ ಮತ್ತು ಕು ಸಮೃದ್ಧಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೆಲ ಪೋಷಕರು ಶಾಲಾ ಚಟುವಟಿಕೆಯ ಅಭಿಪ್ರಾಯ ಹಂಚಿಕೊಂಡರು. ನಂತರ ಶಾಲಾ ಮಕ್ಕಳಿಂದ ಮನೊರಂಜನ ಕಾರ್ಯಕ್ರಮ ಜರುಗಿತ್ತು.