ಶಾಲಾ ಬಾಲಕಿಯರಿಗೆ ಸಮವಸ್ತ್ರ, ಚೂಡಿದಾರ್,ಪ್ಯಾಂಟ್‌ಗೆ ಶಿಫಾರಸ್ಸು

ಬೆಂಗಳೂರು,ಜೂ.೬:ಬಾಲಕಿಯರ ಶಾಲಾ ಸಮವಸ್ತ್ರವನ್ನು ಸ್ಕರ್ಟ್‌ನಿಂದ ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ರಾಜ್ಯ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಬುರಗಿ, ಸಹಾಯಕ ನಿರ್ದೇಶಕರು ಸ್ಕರ್ಟ್ ಧರಿಸುವುದರಿಂದ ಹುಡುಗಿಯರು ಎದುರಿಸುತ್ತಿರುವ ಅನಾನುಕೂಲತೆಗಳ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ನರೆದ ನಂತರ ಆಯೋಗ ಈ ವಿಷಯವನ್ನು ಪರಿಗಣಿಸಿ ಶಿಕ್ಷಣ ಇಲಾಖೆಗೆ ಬಾಲಕಿಯರ ಸ್ಕರ್ಟ್‌ನ್ನು ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಿಸುವಂತೆ ಪತ್ರ ಬರೆದು ಶಿಫಾರಸ್ಸು ಮಾಡಿದೆ.ಹುಡುಗಿಯರು ನಾಚಿಕೆಯ ಸ್ವಭಾವವುಳ್ಳವರು. ಪ್ರಯಾಣದ ವೇಳೆ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವಾಗ ಸೈಕ್ಲಿಂಗ್ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವಾಗ ಸ್ಕರ್ಟ್ ಧರಿಸುವುದರಿಂದ ಅಡಚಣೆಯುಂಟಾಗಲಿದೆ. ಹುಡುಗಿಯರು ಸಾಮಾನ್ಯವಾಗಿ ಸ್ಕರ್ಟ್ ಧರಿಸುವುದರಿಂದ ಅಸ್ವಸ್ಥತೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಆಯೋಗ ಸಮವಸ್ತ್ರವನ್ನು ಚೂಡಿದಾರ್ ಅಥವಾ ಪ್ಯಾಂಟ್‌ಗೆ ಬದಲಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಎಸ್‌ಪಿಸಿಆರ್‌ಸಿ ಅಧ್ಯಕ್ಷರು ಶಾಲಾ ಶಿಕ್ಷಣ ಮತ್ತು ಸಾಕ್ಷಾರತೆ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಆಯೋಗಕ್ಕೆ ಮಾಡಿರುವ ಶಿಫಾರಸ್ಸನ್ನು ತೋರಿಸಿದ್ದಾರೆ. ಈ ಕುರಿತಂತೆ ಸಾರ್ವಜನಿಕ ಅಭಿಪ್ರಾಯ ಸಹ ವ್ಯಕ್ತವಾಗಿದ್ದು, ಇಲಾಖೆಯ ನಿಯಮನುಸಾರ ಬಾಲಕಿಯರ ಸಮವಸ್ತ್ರ ಬದಲಾವಣೆಗೆ ಅವಕಾಶವಿದ್ದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗುವಂತೆ ಹಾಗೂ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಶಿಫಾರಸ್ಸನ್ನು ಶಿಕ್ಷಣ ಇಲಾಖೆಯೇ ನಿರ್ಧರಿಸಬೇಕು ಅಧಿಕಾರಿಗಳಿಂದ ಶಿಫಾರಸ್ಸು ಬಂದಿರುವುದು ಮಾತ್ರವಲ್ಲ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳೊಂದಿಗೂ ಸಂವಾದ ನಡೆಸಲಾಗಿದೆ. ಆಟ ಆಡುವಾಗ ಬಾಲಕಿಯರು ಸ್ಕರ್ಟ್ ಧರಿಸುವುದರಿಂದ ತಮಗಾಗುವ ಅನಾನೂಕೂಲತೆಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಸೈಕಲ್ ಸವಾರಿ ಮಾಡುವಾಗ ಚೂಡಿದಾರ್ ಅಥವಾ ಪ್ಯಾಂಟ್ ಧರಿಸಿದರೆ ಸಂಕೋಚದಿಂದ ದೂರ ಉಳಿಯಬಹುದೆಂದು ದೂರ ಉಳಿಯುವ ಕುರಿತು ಬಾಲಕಿಯರು ಹಂಚಿಕೊಂಡಿರುವ ಅಭಿಪ್ರಾಯವನ್ನು ಕೆಎಸ್‌ಆರ್‌ಪಿ ಅಧ್ಯಕ್ಷ ತಿಳಿಸಿದ್ದಾರೆ.ಈ ಸಂಬಂಧ ಹುಡುಗಿಯರ ಅಭಿಪ್ರಾಯವನ್ನು ಪರಿಗಣಿಸಿದ್ದರೆ ಒಳ್ಳೆಯದಿತ್ತು. ಲೈಂಗಿಕ ಕಿರುಕುಳವು ಪುರುಷರ ಸಮಸ್ಯೆಯಾಗಿದೆ ಅದನ್ನು ಪುರುಷರೊಂದಿಗೆ ಸಮಾಲೋಚನೆ ನಡೆಸಿ ಬಗೆಹರಿಸಬೇಕು ಹುಡುಗಿಯರು ನಿರ್ದಿಷ್ಟ ರೀತಿಯನ್ನು ಬಟ್ಟೆಗಳನ್ನು ಧರಿಸುವಂತೆ ಒತ್ತಾಯಿಸುವುದು ಸರಿಯಲ್ಲ ಇದು ಸ್ತ್ರೀ ದ್ವೇಷವನ್ನು ತೋರಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಕ್ಕಳ ಹಕ್ಕುಗಳ ಹೋರಾಟಗಾರರು ಇಲಾಖೆ ಮತ್ತು ಆಯೋಗ ಸಮಾಲೋಚನೆ ನಡೆಸಬೇಕು. ಪ್ರಸ್ತುತ ಎಲ್ಲಾ ನಿರ್ಧಾರಗಳನ್ನು ಆಡಳಿತ ಅಥವಾ ಇಲಾಖೆಯೇ ತೆಗೆದುಕೊಳ್ಳುತ್ತಿದೆ ಮತ್ತು ಬಾಲಕಿಯರ ಮೇಲೆ ಹೇರಲಾಗುತ್ತಿದೆ. ಈ ವಿಚಾರವನ್ನು ಬಾಲಕಿಯರ ಮೇಲೆ ಬಿಟ್ಟರೆ ಅವರು ಏನನ್ನು ನಿರ್ಧಾರ ಮಾಡುತ್ತಾರೆ ಎನ್ನುವುದೇ ಉತ್ತಮ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ.