ಶಾಲಾ ಪ್ರಾರಂಭೋತ್ಸವ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ

ಇಂಡಿ :ಜ.2:ಕೊರೋನಾ ಮಹಾಮಾರಿಯಿಂದ ಎಲ್ಲ ಕ್ಷೇತ್ರದಲ್ಲಿಯೂ ಅಡಚಣೆ ಉಂಟಾಗಿದೆ.ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಆನ್‍ಲೈನ್ ತರಗತಿ ಆರಂಭ ಮಾಡಿದ್ದರೂ ಸಹ ಶಿಕ್ಷಕರು ಇಲ್ಲದಕ್ಕಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ತಲೆಗೆ ಹತ್ತುತ್ತಿಲ್ಲ.ಮಕ್ಕಳಿಲ್ಲದೆ ಶಾಲೆಯಲ್ಲಿ ಕುಳಿತು ಮರಳಿ ಹೋಗುವುದು ಶಿಕ್ಷಕರಿಗೂ ಬೇಸರವಾಗಿತ್ತು. ಸಧ್ಯ ವಿದ್ಯಾರ್ಥಿಗಳು,ಶಿಕ್ಷಕರು ಉತ್ಸುಕರಾಗಿ ಶಾಲೆಗೆ ಬಂದಿದ್ದು,ತಮಗೆಲ್ಲ ಶುಭವಾಗಲಿ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಗೋಳಸಾರ ಗ್ರಾಮದ ಶ್ರೀ ಪುಂಡಲಿಂಗೇಶ್ವರ ಸರ್ಕಾರಿ ಪಪೂ ಕಾಲೇಜು,ಪ್ರೌಢ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಶಿಕ್ಷಣ ಪಡೆದುಕೊಂಡು ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಿ,ಕಲಿತ ಶಾಲೆ,ತಂದೆ,ತಾಯಿಗಳಿಗೆ ಗೌರವ ತರುವ ಕೆಲಸ ಮಾಡಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಅಕ್ಷರಜ್ಞಾನದ ಜೊತೆಗೆ ಇತರೆ ವಿಷಯಗಳನ್ನು ಕಲಿತುಕೊಳ್ಳಬೇಕು.ಸಾಮಾಜಿಕ ಅಂತರ,ಮಾಸ್ಕ ಧರಿಸಿ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ಪುಣ್ಯಕ್ಷೇತ್ರ ಗೋಳಸಾರ ಗ್ರಾಮದ ಪುಂಡಲಿಂಗ ಮಹಾಶಿವಯೋಗಿಗಳ ಪುಣ್ಯನೆಲದಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲರಿಗೂ ಪುಂಡಲಿಂಗೇಶ್ವರರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ಜಿಪಂ ಸದಸ್ಯ ಬಿ.ಆರ್.ಯಂಟಮಾನ ಮಾತನಾಡಿದರು.ಎಸ್‍ಡಿಎಂಸಿ ಅಧ್ಯಕ್ಷ ಶರಣುಸಾಹುಕಾರ ನಿಂಬರಗಿ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಶಿಕ್ಷಣ,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿಂದುರಾಯಗೌಡ ಪಾಟೀಲ, ಜಿಪಂ ಸದಸ್ಯ ಆಲಿಂಗರಾಯ ಮಹಾರಾಜಮಠ,ಕಾಂತು ಮಾಲಗಾರ,ಬಿಇಒ ವಸಂತ ರಾಠೋಡ,ಕ್ಷೇತ್ರ ಸಮನ್ವಾ„ಕಾರಿ ಸಿ.ಎಂ.ಬಂಡಗಾರ,ಬಿಆರ್‍ಪಿ ಐ.ಜಿ.ಆಳೂರ ,ಪ್ರೌಡ ಶಾಲೆ ಮುಖ್ಯಶಿಕ್ಷಕ ವಿನೋದ ದೊಡ್ಡಗಾಣಿಗೇರ ಇತರರು ಕಾರ್ಯಕ್ರಮದಲ್ಲಿ ಇದ್ದರು.

ಮಕ್ಕಳಿಗೆ ಗುಲಾಬಿ ಹೂ ಹಾಗೂ ಪೆನ್ನು ನೀಡಿ ಶಾಲೆಗೆ ಸ್ವಾಗತಿಸಲಾಯಿತು.