ಶಾಲಾ ಪ್ರಾರಂಭೋತ್ಸವ: ಮಕ್ಕಳಿಗೆ ಅದ್ದೂರಿ ಸ್ವಾಗತ

ಚನ್ನಮ್ಮನ ಕಿತ್ತೂರ, ಜೂ1: ರಾಜ್ಯಾಧ್ಯಂತ ಶಾಲೆಗಳು ಆರಂಭವಾಗಿದ್ದು.ಕಳೆದ ಒಂದುವರೆ ತಿಂಗಳಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾಂಭಗೊಂಡಿದ್ದು ರಜೆಯ ಖುಷಿಯಲ್ಲಿದ್ದ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆಂದು ಪ್ರಧಾನ ಗುರು ಸದಾಶಿವ ಪೆÇೀಳ ಹೇಳಿದರು.
ತಾಲೂಕಿನ ದೇವಗಾಂವ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಪುಸ್ತಕ ವಿತರಿಸಿ ಸಿಹಿ ಹಂಚಿ ಭರಮಾಡಿಕೊಂಡು ಅವರು ಮಾತನಾಡಿದರು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಶಾಲೆಗೆ ಬರುವ ಮೊದಲ ದಿನ ಶಾಲೆಯಲ್ಲಿ ಬಿಸಿಯೂಟ ಸಿದ್ಧಪಡಿಸಿದ್ದು ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಬಿಸಿಯೂಟ ಬಡಿಸಲಾಯಿತು.
ಮಕ್ಕಳ ಪೆÇೀಷಕರೊಂದಿಗೆ ಸಂವಾದ ನಡೆಸಿ ನಿಮ್ಮ ಮಕ್ಕಳ ಹೆಸರನ್ನು ನೊಂದಾಯಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ವಿನಂತಿಸಿಕೊಂಡರು.
ಈ ವೇಳೆ ಎಸ್ ಡಿಎಮ್ ಸಿ ಅಧ್ಯಕ್ಷ ಮಂಜುನಾಥ ಮುಪ್ಪಿನಮಠ, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು, ಪಿಡಿಓ, ಶಿಕ್ಷಕ-ಶಿಕ್ಷಕೀಯರು, ಸಾರ್ವಜನಿಕರು ಉಪಸ್ಥಿತರಿದ್ದರು.