ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಡಾ. ಸಿದ್ದು ಪಾಟೀಲ್

ಹುಮನಾಬಾದ್:ಜೂ.2: ತಾಲ್ಲೂಕಿನ ಜನತಾನಗರದ ಸರ್ಕಾರಿ ಫ್ರೌಢ ಶಾಲೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪಾ ಪಾಟೀಲ ರವರು ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಳೆದ ತಿಂಗಳ ಹತ್ತನೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಸೂಚಿಸಿದರು. ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರವನ್ನು ನೀಡಿ ಶುಭಾಶಯಗಳು ಕೋರಿ ಶಾಲೆಯ ಮೂಲಭೂತ ಸೌಕರ್ಯಗಳು ಹಾಗೂ ಶಾಲಾ ಸುವ್ಯವಸ್ಥೆ ಬಗ್ಗೆ ಪರೀಶಿಲಿಸಿದ ಅವರು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಧಿಕಾರಿ ವೆಂಕಟೇಶ ಕೂಡಲ್, ಬಿಆರ್‍ಸಿ ಸಂಜುಕುಮಾರ ಕಾಂಗೆ, ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ್ ದಾನ,. ಸಹ ಶಿಕ್ಷಕರಾದ ಮಲ್ಲಣ್ಣ, ಭಾಲ್ಕೇಶ್ವರ, ಜಗದೀಶ ರಾಜಣ್ಣ, ಸಹ ಶಿಕ್ಷಕಿಯರಾದ ಗಾಯತ್ರಿ, ಕವಿತಾ, ಗುರುಬಾಯಿ, ಜಗದೇವಿ, ಮುಖಂಡರಾದ ನಾಗಭೂಷಣ ಸಂಗಮ್, ಗಿರೀಶ ತುಂಬಾ, ಇದ್ದರು.