ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ತರಬೇತಿ

ಮಸ್ಕಿ,ನ.೨೧- ಇಲ್ಲಿಯ ಕಬ್ಬೇರ ಬಡಾವಣೆ ಬಳಿಯ ಅಂಗನಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕುರಿತು ತರಬೇತಿ ಶಿಬಿರ ಏರ್ಪಡಿಸಲಾಗಿತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶರಣಮ್ಮ ಶಿಬಿರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಈ ಯೋಜನೆ ಯಿಂದ ಮಕ್ಕಳ ಶಿಕ್ಷಣ ಮತ್ತು ಬುದ್ದಿವಂತಿಕೆ ಮಟ್ಟ ಬೆಳೆಯಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು. ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಮಾಹಿತಿ ನೀಡಲು ಮುಂದಾಗ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾನಾ ನಮೂನೆಗಳ ಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು . ಮಸ್ಕಿ ವಲಯದ ಮೇಲ್ವಿಚಾರಕಿ ಬಸ್ಸಮ್ಮ, ಹೇಮಾ, ಸುಜಾತಾ ಬಾಳೇಕಾಯಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ, ಜಿಲ್ಲಾ ಪಂಚಾಯಿತಿ ಶಿಶು ಅಭಿವೃದ್ದಿ ಯೋಜನೆ ಲಿಂಗಸುಗೂರು ಸಹಯೋಗದಲ್ಲಿ ೩ ನೇ ಹಂತದ ಶಾಲಾ ಪೂರ್ವ ಶಿಕ್ಷಣ ಬಲವರ್ದನೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು.

(೨೧,ನ.ಎಂಎಸ್ಕೆ ಪೋಟೋ೦೨)