ಶಾಲಾ ಪರಿಸರ ವೀಕ್ಷಿಸಿ ಮೆಚ್ಚುಗೆ


ಬಾದಾಮಿ,ಎ.18: ಸಮೀಪದ ಬನಶಂಕರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಾಗಲಕೋಟ ವಿಭಾಗದ ಉಪವಿಭಾಗಾಧಿಕಾರಿ, ಪೆÇ್ರಬೆಷನರಿ ಕೆ.ಎ.ಎಸ್.ಅಧಿಕಾರಿ ಅರ್ಜುನ ಒಡೆಯರ ಭೇಟಿ ನೀಡಿ ಶಾಲಾ ಪರಿಸರ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಲ್ಲಿನ ಆಟದ ಮೈದಾನ, ಶೌಚಾಲಯ, ಕಿಚನ್ ಗಾರ್ಡನ್, ಔಷಧಿಯ ಸಸ್ಯಗಳು, ಸಿಸಿ ಕ್ಯಾಮರಾ, ಅಚ್ಚುಕಟ್ಟಾದ ಅಕ್ಷರದಾಸೋಹ ಕೊಠಡಿ, ಮಕ್ಕಳು ಪರಿಸರದಲ್ಲಿ ಕುಳೀತು ಊಟ ಮಾಡುವ ಕಟ್ಟೆ, ಭಾರತದ ಭೂಪಟಕ್ಕೆ ಅಳವಡಿಸಿದ ಕಾರಂಜಿ, ಮೂರು ಮಂಗಗಳ ತತ್ವ, ಮಕ್ಕಳ ಕಲಿಕೆಗಾಗಿ ಹಮ್ಮಿಕೊಂಡ ಕಲಿಕಾ ಚಾಪೆ, ಸ್ಮಾರ್ಟ್ ಕ್ಲಾಸ್ ಈ ಎಲ್ಲ ಸೌಲಭ್ಯಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದರು. ಪ್ರತಿ ಗ್ರಾಮದಲ್ಲಿ ಇಂತಹ ಸರಕಾರಿ ಶಾಲೆಗಳು ಆರಂಭವಾದರೆ ಸರಕಾರಿ ಸೌಲಭ್ಯಗಳು ಸಾರ್ಥಕವಾಗುತ್ತದೆ ಎಂದ ಅವರು ಸರಕಾರಿ ಶಾಲೆಗಳು ಹೀಗೂ ಉಂಟೆ ಇದೊಂದು ಅದ್ಭುತ ಶಾಲೆ ಎಂದು ಸಂತಸ ವ್ಯಕ್ತಪಡಿಸಿದರು. ತಾ.ಪಂ.ಇಒ ಸಿದ್ದಪ್ಪ ನಕ್ಕರಗುಂದಿ ಮಾತನಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿದ ಇದೊಂದು ಮಾದರಿ ಶಾಲೆ ಇದಾಗಿದ್ದು, ಗ್ರಾಮ ಪಂಚಾಯತ ವತಿಯಿಂದ ಸಹಾಯ ಮಾಡಿ ಎಂದು ಸ್ಥಳದಲ್ಲಿಯೇ ಇದ್ದ ಚೊಳಚಗುಡ್ಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಒ) ಚಂದ್ರಕಾಂತ ದೊಡ್ಡಪತ್ತಾರ ಅವರಿಗೆ ಸೂಚಿಸಿದರು. ಶಾಲೆಯ ಮುಖ್ಯಶಿಕ್ಷಕಿ ಪಿ.ಎನ್.ಚಳಗೇರಿ, ಸಹಶಿಕ್ಷಕರು ಹಾಜರಿದ್ದರು.
ಚಿತ್ರ ಮಾಹಿತಿ;
17-ಬಾದಾಮಿ-2ಎ,ಬಿ;ಸಮೀಪದ ಬನಶಂಕರಿ ಶಾಲೆಗೆ ಉಪವಿಭಾಗಾಧಿಕಾರಿ ಅರ್ಜುನ ಒಡೆಯರ, ತಾ.ಪಂ.ಇಒ ಸಿದ್ದಪ್ಪ ನಕ್ಕರಗುಂದಿ ಭೇಟಿ ನೀಡಿದರು.