ಶಾಲಾ ದಾಖಲಾತಿಗಾಗಿ ಹೋಗುತ್ತಿದ್ದಾಗ ಅಪಘಾತ: ಇಬ್ಬರ ಸಾವು

ವಿಜಯಪುರ,ಜೂ.22-ಬುಲೆರೋ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಸಾವಿಗಿಡಾಗಿರುವ ಘಟನೆ ವಿಜಯಪುರ ತಾಲೂಕಿನ ಕೌವಲಗಿ ಗ್ರಾಮದ ಬಳಿ ನಡೆದಿದೆ.
ಬೈಕ್ ಮೇಲಿದ್ದ ಪ್ರದೀಪ ಭೀಮು ರಾಠೋಡ(17) ಹಾಗೂ ಅನೀಲ ಚಿನ್ನು ರಾಠೋಡ (17) ಮೃತ ದುರ್ದೈವಿಗಳು. ವಿಜಯಪುರದಿಂದ ದೇವರಹಿಪ್ಪರಗಿ ಮಾರ್ಗವಾಗಿ ಹಿಟ್ನಳ್ಳಿ ತಾಂಡಾಕ್ಕೆ ಶಾಲಾ ದಾಖಲಾತಿಗಾಗಿ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಬುಲೆರೋ ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.