ಶಾಲಾ ಗುರುಗಳಿಗೆ ಸನ್ಮಾನಿಸಿ ಗುರು ಪೂರ್ಣಿಮೆ ಆಚರಿಸಿದ ಮುಜೀಬುದ್ದೀನ್

ರಾಯಚೂರು.ಜು.೧೪- ಗುರು ಪೂರ್ಣಿಮೆಯ ದಿನದಂದು ವಿದ್ಯಾದಾನ ಮಾಡಿದ ಗುರುಗಳಾದ ವೆಂಕಟೇಶ್ ರಾವ್, ಸಾಗರ್ ರವರಿಗೆ ಕಾಂಗ್ರೆಸ್ ಮುಖಂಡ ಮುಜೀಬುದ್ದೀನ್ ಅವರು ಸನ್ಮಾನಿಸಿ ಸತ್ಕರಿಸಿ ಆಶೀರ್ವಾದ ಪಡೆಯುವ ಮೂಲಕ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಗರದ ಕೋಟೆ ಏರಿಯಾದಲ್ಲಿರುವ ತಮ್ಮ ಗುರುಗಳ ಮನೆಗೆ ತಮ್ಮ ಬಾಲ್ಯದ ಸ್ನೇಹಿತರಾದ ನಾಗೇಶ್ ಮತ್ತು ಸತ್ಯನಾರಾಯಣ ಜೊತೆಗೂಡಿ ತೆರಳಿ ಗುರುಗಳನ್ನು ಗೌರವಿಸಿ, ಗುರುಗಳ ಆರೋಗ್ಯ ವಿಚರಿಸಿದರು. ಈ ಸಂದರ್ಭದಲ್ಲಿ ಮುಜೀಬುದ್ದೀನ್ ಅಳಿಯ ಉಪಸ್ಥಿತರಿದ್ದರು.