ಶಾಲಾ ಕೊಠಡಿ ಉದ್ಘಾಟನೆ


ನವಲಗುಂದ,ಮಾ.10: ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ತಿರ್ಲಾಪುರ ಗ್ರಾಮದಲ್ಲಿಯ ಶ್ರೀಮತಿ ನಾಗಮ್ಮ ಕೋಂ. ಚಿನ್ನರಡ್ಡಿ ವೀರರಡ್ಡಿ ಸರಕಾರಿ ಪ್ರೌಢಶಾಲೆಗೆ ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಿಎಸ್ ಆರ್ ಯೋಜನೆಯಡಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಿದ ರೂ. 36 ಲಕ್ಷ ಮೌಲ್ಯದ 2 ಕೊಠಡಿಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಂತರ ಶಾಲಾ ಮಕ್ಕಳ ಉತ್ತಮ ಶಿಕ್ಷಣಕ್ಕೆ ಸಹಕರಿಸಲು ಸ್ಮಾರ್ಟ್‍ಬೋರ್ಡ್ ಮತ್ತು ಡೆಸ್ಕ್ ವಿತರಿಸಿದರು
ಸಾನ್ನಿಧ್ಯವನ್ನು ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು
ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವವರ, ಕ್ಷೇತ್ರಶಿಕ್ಷಣಾಧಿಕಾರಿಗಲಾದ ಶಿವಾನಂದ ಮಲ್ಲಾಡ, ಮಾಜಿ ಜಿ ಪ ಅಧ್ಯಕ್ಷೆ ಶಂತಾದೇವಿ ನೀಡವಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಮಾಜಿ ಶಾಸಕ ಆರ್.ಬಿಶಿರಿಯಣ್ಣನವರ ಪಕ್ಷದ ಮುಖಂಡರಾದ ಬಸವರಾಜ ಕುಂದಗೋಳಮಠ, ಷಣ್ಮುಖ ಗುರಿಕಾರ, ಗಣೇಶ ಹೊಳೆಯನ್ನವರ ಗ್ರಾಮದ ಹಿರಿಯರು, ಪಕ್ಷದ ಪ್ರಮುಖರು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.