ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ: ಗದ್ದಿಗೌಡರ ಭರವಸೆ

ಬಾದಾಮಿ,ಸೆ18: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಸಂಸದ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಗತ್ಯ ಅನುದಾನ ನೀಡಲಾಗುವುದು ಎಂದು ಬಾಗಲಕೋಟೆ ಲೋಕಸಭಾ ಸದಸ್ಯ, ಕೃಷಿ ಸ್ಥಾಯಿ ಸಮತಿಯ ಅಧ್ಯಕ್ಷ ಪಿ.ಸಿ.ಗದ್ದಿಗೌಡರ ಭರವಸೆ ನೀಡಿದರು.
ಅವರು ಸಂಸದ ಸ್ವಗ್ರಾಮದ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಸುಧಾರಣೆ ಬಗ್ಗೆ ಚರ್ಚಿಸಿ ಮಕ್ಕಳ ಪ್ರಗತಿಯನ್ನು ಪರಿಶೀಲಿಸಿದರು.
ಕಟ್ಟಡಗಳ ವೀಕ್ಷಣೆ ಮಾಡಿ ದುರಸ್ತಿ ಮತ್ತು ಹೊಸ ಕಟ್ಟಡಗಳ ನಿರ್ಮಾಣದ ಬಗ್ಗೆ ಚರ್ಚಿಸಿ ಆರು ಕೊಠಡಿಗಳನ್ನು ನಮ್ಮ ಶಾಲೆಗೆ ತಮ್ಮ ಅನುದಾನದಲ್ಲಿ ಕಟ್ಟಿಸಿ ಕೊಡುವುದಾಗಿ ಹೇಳಿ ಕಾರ್ಯಾರಂಭ ಮಾಡಲು ಸೂಚಿಸಿದರು. ಈಗಾಗಲೇ ಶಾಲಾ ಕಾಂಪೌಂಡ್ ಕಾಮಗಾರಿ ಶೇ60 ರಷ್ಟು ಪೂರ್ಣಗೊಂಡಿದ್ದು, ಉಳಿದ ಶೇ40 ರಷ್ಟು ಕೆಲಸವನ್ನು ಶೀಘ್ರದಲ್ಲಿ ಮುಗಿಸುವರೆಂದು ಹೇಳಿ ಮಕ್ಕಳ ಜೊತೆ ಮಾತನಾಡಿ ಅವರಿಗೆ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರು, ಮುಖ್ಯಶಿಕ್ಷಕಿ ಕಮಲಾಕ್ಷಿ ಗಾಣಿಗೇರ, ಸೇರಿದಂತೆ ಉರ್ದು ಶಾಲೆಯ ಮುಖ್ಯಶಿಕ್ಷಕರು ಎರಡು ಶಾಲೆಯ ಸಹಶಿಕ್ಷಕರು, ಶಾಲಾ ಮಕ್ಕಳು ಹಾಜರಿದ್ದರು.