ಶಾಲಾ-ಕಾಲೇಜು ಸಮಯಕ್ಕೆ ಬಾರದ ಬಸ್‍ಗಳು ವಿದ್ಯಾರ್ಥಿಗಳು ಹೈರಾಣ

ವಾಡಿ: ಸೆ.17: ಕಲಬುರಗಿ ಜಿಲ್ಲೆಯಿಂದ ಯಾದಗಿರಿಗೆ ನಿತ್ಯ ಜನರಿಗೆ ಸಂಪರ್ಕ ಕಲ್ಪಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‍ಗಳು ವಿಧ್ಯಾರ್ಥಿಗಳ ಶಾಲಾ ಕಾಲೇಜು ಸಮಯಕ್ಕೆ ಬಾರದೇ ರಸ್ತೆ ಬದಿಯಲ್ಲಿ ಗಂಟೇ ಗಟ್ಟಲೇ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ನಿತ್ಯ ಎದುರಾಗುತ್ತಿದೆ ಈ ಕುರಿತು ವಿಧ್ಯಾರ್ಥಿಗಳು ಹಲವು ಬಾರಿ ಬಸ್‍ತಡೆದು ಹೋರಾಟ ನಡೆಸಿರುವ ಘಟನೆಗಳು ನಡೆಯುತ್ತಿವೆ.
ಕಲಬುರಗಿ ಡಿಪೋ ಹಾಗೂ ಯಾದಗಿರಿ ಡಿಪೋದಿಂದ ಒಟ್ಟು ಸೇರಿ 40 ಅಧಿಕ ಬಸ್‍ಗಳು ಓಡಾಡುತ್ತವೆ. ಜನರು ಸಾರಿಗೆ ಪಯಣದತ್ತ ಹೆಚ್ಚು ಒಲವನ್ನು ತೋರುತ್ತಿರುವುದು ಗಮನಾರ್ಹ ಸಂಗತಿ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವುದು ಇರದ ವಿಶೇಷತೆ ಕೂಡಾ ಹೌದು. ಆದರೆ, ಶಾಲಾ ವಿಧ್ಯಾರ್ಥಿಗಳಿಗೆ ನಿಲ್ಲಲು ಸ್ಥಳ ಸಿಗದೆ ಜೋತು ಬಿದ್ದು ಸಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಈ ತರಹ ಹತ್ತುವುದು ಅಫರಾದ ಜೊತೆಗೆ ಅನಾಹುತಗಳು ನಡೆಯುವ ಸಾಧ್ಯತೆ ಇವೆ. ಆದರೆ ವಿಧ್ಯಾರ್ಥಿಗಳ ಭವಿಷ್ಯ ಅವಲಂಬನೆ ಇರುವುದು ಶಿಕ್ಷಣದ ಮೇಲೆ ಆ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡು ಪ್ರಯಾಣ ಬೆಳೆಸುವ ಘಟನೆಗಳು ನಿತ್ಯ ಜರುಗುತ್ತಿವೆ. ಇದನ್ನೆಲ್ಲಾ ಕಂಡು ಪರಿಹಾರ ಹುಡುಕದೆ ಕೇವಲ ಆಫೀಸ್ ರೂಮಿನಲ್ಲಿ ಕಾಲ ಕಳೆಯುತ್ತಿರುವ ಮೇಲಾಧಿಕಾರಿಳಿಗೆ ವಿಧ್ಯಾರ್ಥಿಗಳು ನಿತ್ಯ ಶಾಫ ಹಾಕುತ್ತಿದ್ದಾರೆ.

ಒಂದು ಬಸ್ಸಿನಲ್ಲಿ ಕಾಲೇಜು ಸಮಯದಲ್ಲಿ 80ಕ್ಕೂ ಅಧಿಕ ಜನರನ್ನು ಪ್ರಯಾಣ ಬೆಳೆಸುತ್ತಿದ್ದಾರೆ. ಹಲಕಟ್ಟಾ, ಬಲರಾಮಚೌಕ್, ವಾಡಿ, ರಾವೂರ, ಶಹಬಾದ, ಭಂಕೂರ ವಿಧ್ಯಾರ್ಥಿಗಳು ನಿತ್ಯ ಕಷ್ಟಪಟ್ಟು ಕಾಲೇಜು ಸೇರುತ್ತಿದ್ದಾರೆ. ಈ ಸಮಸ್ಯೆ ಕೇವಲ ರೂಟಿನಲ್ಲಿ ಸುತ್ತಾಡುವ ಬಸ್ಸಿನದಲ್ಲ ಜಿಲ್ಲೆಯಾದ್ಯಾಂತ ನಿತ್ಯ ಸಮಸ್ಯೆ ಅನಾವರಣ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಜಿಲ್ಲೆಯಲ್ಲಿಯೇ ಸಮಸ್ಯೆ ನಡೆಯುತ್ತಿದೆ. ವಿಧ್ಯಾರ್ಥಿಗಳ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಲಬುರಗಿ ಜಿಲ್ಲೆಗೆ ಇನ್ನು ಹೆಚ್ಚಿನ ಬಸ್‍ಗಳನ್ನು ಬಿಡುಗಡೆ ಮಾಡಬೇಕು. ಬಸ್‍ಗಳನ್ನು ವಾಡಿ ಮೂಲಕ ಪ್ರಯಾಣ ಬೆಳೆಸಬೇಕು. ಒಂದೆರಡು ಬಸ್‍ಗಳನ್ನು ಮಾತ್ರ ಹೊರಗqಯಿಂದ ಪ್ರಯಾಣ ಬೆಳೆಸಿದರೆ ಅಭ್ಯಂತರವಿಲ್ಲ. ಯಾದಗಿರಿ ಡಿಪೋ ಬಸ್‍ಗಳು ಕೂಡಾ ಎಲ್ಲಾ ಗುರುತಿಸಿದ ಸ್ಥಳದಲ್ಲಿ ನಿಲ್ಲಬೇಕು. ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಹೆಸರಾಗಬೇಕು.
ಮಲಿಕಪಾಶಾ ಮೌಜನ್ ವಕೀಲರು.


ಪ್ರತಿಯೊಂದು ಬಸ್‍ಗಳನ್ನು ವಾಡಿ ಪಟ್ಟಣದಿಂದ ಪ್ರಯಾಣ ಬೆಳೆಸಬೇಕು. ವಿಧ್ಯಾರ್ಥಿ ಹಿತದಿಂದ ಹೆಚ್ಚಿನ ಬಸ್‍ಗಳನ್ನು ಬೆಳಗ್ಗೆ ಮತ್ತು ಸಾಯಂಕಾಲ ಶಾಲಾ- ಕಾಲೇಜು ಸಮಯದಲ್ಲಿ ಸಂಚರಿಸಬೇಕು. ಮಕ್ಕಳು ಕಂಡರೆ ಬಸ್ ನಿಲ್ಲಿಸದೆ ಇರುವ ಕುರಿತು ಗಮನಕ್ಕಿದೆ. ಈ ತರಹ ಮಾಡಿದರೆ ಸಹಿಸಲಾಗದು. ಸಮಸ್ಯೆಗೆ ಪರಿಹಾರ ಕಲ್ಪಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಬಲರಾಮಚೌಕ್ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಸಿದ್ದು ಪೂಜಾರಿ. ಅಧ್ಯಕ್ಷರು ವಾಡಿ ಕರವೇ.