ಶಾಲಾ, ಕಾಲೇಜು :ವಾಲ್ಮಿಕಿ ಜಯಂತಿ ಆಚರಣೆ

ರಾಂiiಚೂರು.ಅ.೩೧-ನಗರದ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಜವಾಹರನಗರ ಸಂಚಾಲಿತ ಜವಾಹರನಗರ ರಾಯಚೂರು ಇದರ ಶಾಲಾ-ಕಾಲೇಜುಗಳಲ್ಲಿ ಇಂದು ವಾಲ್ಮಿಕಿ ಜಯಂತಿಯನ್ನು ಆಚರಿಸಲಾಯಿತು.
ಪ್ರಾಚಾರ್‍ಯರಾದ ಪ್ರಕಾಶ ಕುಲಕರ್ಣಿಯವರು ವಾಲ್ಮಿಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಾಲ್ಮಿಕಿ ಒಬ್ಬ ಮಹಾನ್ ಋಷಿ ಅವರ ಆದರ್ಶಗಳು ಇಂದು ಜಗತ್ತಿಗೆ ಅನಿವಾರ್‍ಯವಾಗಿದೆ ಅವುಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ ಎಂದರು.
ಸಂಘದ ಕಾರ್ಯದರ್ಶಿಯದ ಜೆ.ಎಂ. ವೀರೇಶ ಮಾತನಾಡಿ ವಾಲ್ಮಿಕಿ ಮಹರ್ಷಿಯು ಭಾರತದ ಮತ್ತು ಜಗತ್ತಿನ ಶ್ರೇಷ್ಠ ಗ್ರಂಥವಾದ ರಾಮಾಯಣವನ್ನು ರಚಿಸಿದ್ದಾರೆ. ಈ ರಾಮಾಯಣದಲ್ಲಿ ಬರುವ ಶ್ರೀರಾಮನ ಪಾತ್ರವೂ ಆದರ್ಶವಾಗಿದೆ. ಶ್ರೀರಾಮನ ವ್ಯಕ್ತಿತ್ವ ಹಾಗೂ ನಡೆನುಡಿ ಎಲ್ಲ ಕಾಲಕ್ಕೂ ಮಾದರಿಯಾಗಿದೆ ಎಂದರು.
ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾಧ ಮುರಳಿಧರ ಕುಲಕರ್ಣಿ ಮಾತನಾಡಿ ವಾಲ್ಮಿಕಿಯು ಮಹರ್ಷಿಯಾಗುವುದಕ್ಕಿಂತ ಮೊದಲು ಅರಣ್ಯದಲ್ಲಿ ಬೇಟೆಯಾಡುತ್ತಿದ್ದ ಕ್ರೂರ ಮೃಗಗಳಂತೆ ಬದುಕುತ್ತಿದ್ದರು. ನಾರದ ಮಹರ್ಷಿಗಳ ಬೋಧನೆಯಂತೆ ಸಂಸ್ಕಾರವನ್ನು ಪಡೆದು ಮಹಾತಪಸ್ಸನ್ನು ಆಚರಿಸಿದರು. ಅವರ ತಪಸ್ಸು ಮಾಡುವಾಗ ಅವರ ಮೈಯಲ್ಲಿ ಹುತ್ತು ಬೆಳೆದಿತ್ತು. ಇದನ್ನು ಸಂಸ್ಕೃತದಲ್ಲಿ ವಾಲ್ಮಿಕಿ ಎಂದು ಕರೆಯುತ್ತಾರೆ. ಹುತ್ತದಿಂದ ಹೊರ ಬಂದ ಕಾರಣ ವಾಲ್ಮಿಕಿಯಾದರು. ನಂತರ ಇವರು ಜಗತ್ತಿನ ಮಹಾಋಷಿಗಳಲ್ಲಿ ಒಬ್ಬರಾದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಕಾಲೇಜಿನ ಸಿಬ್ಬಂದಿಯಾದ ಆಡವಿಚಾರ , ರವೀಂದ್ರ ಕುಲಕರ್ಣಿ ಇವರು ಉಪಸ್ಥಿತರಿದ್ದರು.